fbpx

ಆರ್.ಆರ್. ಜನ್ನು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ.

ಕೊಪ್ಪಳ ಆ. ೧೭ (ಕ ವಾ) ಕೊಪ್ಪಳ ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರಿಗೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳಿಂದ ಸೋಮವಾರದಂದು ಜಿಲ್ಲಾ
ಪಂಚಾಯತಿ ಸಭಾಂಗಣದಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.  ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು
ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ
ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡಿದ್ದೇನೆ.  ಜಿಲ್ಲೆಯ ಜನರು ಸಹೃದಯಿಗಳಾಗಿದ್ದು,
ಉತ್ತಮ ಸೇವೆ ಸಲ್ಲಿಸಲು ಸಹಕರಿ
  ನೂತನ
ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ರಮಣದೀಪ್ ಚೌದರಿ ಅವರು ಈ ಸಂದರ್ಭದಲ್ಲಿ
ಮಾತನಾಡಿ, ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು, ಇಲ್ಲಿ ಸೇವೆ
ಸಲ್ಲಿಸಲು ಬಂದಿರುವುದಕ್ಕೆ ಸಂತಸವಾಗಿದೆ.  ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ
ಪಡೆದುಕೊಂಡು, ಅದರ ನಿವಾರಣೆಯ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ
ಭರವಸೆ ನೀಡಿದರು. ಜಿಲ್ಲಾಡಳಿತದ ಪರವಾಗಿ ಆರ್.ಆರ್. ಜನ್ನು ಅವರಿಗೆ
ಸನ್ಮಾನಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಅವರು, ಜನ್ನು ಅವರು
ತಾಳ್ಮೆ ಹಾಗೂ ಸಹನೆಯ ಪ್ರತಿರೂಪದಂತೆ ಇದ್ದರು, ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ
ನೀಡುವ ಮೂಲಕ ಜಿಲ್ಲೆಯ ಪ್ರಗತಿಗೆ ಶ್ರಮಿಸಿದರು ಎಂದರು.
     ಜಿಲ್ಲಾ ಪಂಚಾಯತಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್,
ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು, ಪತ್ರಕರ್ತ ಸಿದ್ದಪ್ಪ ಹಂಚಿನಾಳ ಸೇರಿದಂತೆ
ಹಲವರು ಈ ಸಂದರ್ಭದಲ್ಲಿ ಮಾತನಾಡಿದರು.

ಸಿದ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಗೂ
ಚುನಾಯಿತ ಪ್ರತನಿಧಿಗಳಿಗೆ ಧನ್ಯವಾದಗಳನ್ನು ಸಲ್ಲಿಸಬಯಸುತ್ತೇನೆ ಎಂದರು.

Please follow and like us:
error

Leave a Reply

error: Content is protected !!