ಕಾರ್ಯಾಗಾರ ಸದುಪಯೋಗಪಡಿಸಿಕೊಳ್ಳಿ-ಬಸವರಾಜ ಬಂಡಿಹಾಳ

ಕೊಪ್ಪಳ : ನೂತನ ಪಿಂಚಣಿ ಯೋಜನೆ ಬಗ್ಗೆ ಡಿ. ೨೮ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಸರ್ಕಾರಿ ನೌಕರರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ರಾಜ್ಯ ಖಜಾನೆ ನೌಕರರ ಸಂಘದ ಸಹಯೋಗದೊಂದಿಗೆ ಕಾರ್ಯಾಗಾರ ನಡೆಯಲಿದೆ. 
ರಾಜ್ಯದಲ್ಲಿ ೨೦೦೬ರ ಏಪ್ರಿಲ್ ೧ರಿಂದ ನೇಮಕಗೊಂಡ ಎಲ್ಲ ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಕಡ್ಡಾಯವಾಗಿ ಜಾರಿಯಾಗಿದೆ. ಹೊಸದಾಗಿ ವ್ಯಾಖ್ಯಾನಿಸಿರುವ ಅಂಶದಾಯಿ ಕೊಡುಗೆ ನಿವೃತ್ತಿ ವೇತನ ಯೋಜನೆ ಕುರಿತಂತೆ ಬಹಳಷ್ಟು ನೌಕರರಲ್ಲಿ ಮಾಹಿತಿ ಕೊರತೆಯಿಂದಾಗಿ ಗೊಂದಲ ಮೂಡಿದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಪ್ಪಳದಲ್ಲಿ ನೂತನ ಪಿಂಚಣಿ ಯೋಜನೆಯ ಬಗ್ಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವ ನೌಕರರಿಗೆ ಓಓಡಿ ಸೌಲಭ್ಯ ಕಲ್ಪಿಸಲಾಗಿದೆ. ಕಾರಣ ೨೦೦೬ರ ಏಪ್ರಿಲ್ ೧ರಿಂದ ನೇಮಕಗೊಂಡ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಕೊಪ್ಪಳ ಖಜಾಂಚಿ ಬಸವರಾಜ ಬಂಡಿಹಾಳ ಮನವಿ ಮಾಡಿದ್ದಾರೆ. 

Leave a Reply