You are here
Home > Koppal News > ಡಾ|| ಎಪಿಜೆ ಅಬ್ದುಲ್ ಕಲಾಂಗೆ ಭಾವಪೂರ್ಣ ಶ್ರದ್ಧಾಂಜಲಿ.

ಡಾ|| ಎಪಿಜೆ ಅಬ್ದುಲ್ ಕಲಾಂಗೆ ಭಾವಪೂರ್ಣ ಶ್ರದ್ಧಾಂಜಲಿ.

ಕೊಪ್ಪಳ,ಜು.೨೮: ನಗರದಲ್ಲಿರುವ ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸೈಯದ್ ಪೌಂಡೇಶನ ಅಧ್ಯಕ್ಷ ಹಾಗೂ ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೆ.ಎಂ. ಸೈಯದ್‌ರವರು ಕಲಾಂರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡುತ್ತಾ ಕಲಾಂರವರು ನಮ್ಮ ದೇಶ ಕಂಡ ಅಪರೂಪದ ಮಹಾನ ನಾಯಕರಾಗಿದ್ದು, ಅವರ ನಿಧನದಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ ಎಂದರು. ಮುಂದುವರಿದು ಮಾತನಾಡಿ ಕಲಾಂರವರು ಒಬ್ಬ ಆದರ್ಶಪ್ರಾಯ ಮಹಾನ್ ನಾಯಕರಾಗಿದು ಒಳ್ಳೆಯ ವಿಜ್ಞಾನಿ, ಉಪನ್ಯಾಸಕ ಮತ್ತು ಶಿಕ್ಷಕರಾಗಿದ್ದು, ಅವರು ತಮ್ಮ ಕೊನೆಯ ಉಸಿರಿರುವವರೆಗೆ ಮಕ್ಕಳಿಗೆ ಬೋಧನೆ ಮಾಡುತ್ತಲೆ ನಿಧನ ಹೊಂದಿದ್ದಾರೆ. ಅವರ ಆದರ್ಶ ಅವರ ಕೊಡುಗೆ ವಿದೇಶಕ್ಕೆ ಅಪಾರವಾಗಿದೆ. ಭಾರತ ರತ್ನ ಸೇರಿದಂತೆ ವಿವಿಧ ಮಹತ್ತರ ಪ್ರಶಸ್ತಿ ಅವರಿಗೆ ಲಭಿಸಿದೆ ಅವರ ಆದರ್ಶ ಈ ದೇಶದ ಪ್ರತಿಯೊಬ್ಬ ಪ್ರಜೆ ಪಾಲಿಸಬೇಕು ಎಂದವರು ಇದೇ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲೇಂದು ಪರಮಾತ್ಮನಲ್ಲಿ ಕೆ.ಎಂ. ಸೈಯದ್‌ರವರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಸೈಯದ್ ಗೌಸ ಮೊಹಿಯುದ್ಧಿನ್ ಎಫ್.ಎ.ನೂರಬಾಷಾ, ಶೇಖರಪ್ಪ ಹರಿಜನ, ಗವಿಸಿದ್ದಪ್ಪ ಆರೇರ್ ಅಲ್ಲದೆ ಸಯ್ಯದ್ ಫೌಂಡೆಶನ್ಸ್‌ನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

Leave a Reply

Top