fbpx

ವಟಪರವಿ ಗ್ರಾಮಪಂಚಾಯತಿ ಕೇಂದ್ರಸ್ಥಾನವನ್ನಾಗಿ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ:  ಯಲಬುರ್ಗಾ ತಾಲೂಕಿನ ವಟಪರವಿ ಗ್ರಾಮವನ್ನು ಗ್ರಾಮ ಪಂಚಾತಿ ಕೇಂದ್ರಸ್ಥಾನವನ್ನಾಗಿ ಮಾಡಬೇಕೆಂದು ಮ್ಯಾದನೇರಿ ಗ್ರಾಮದ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರ.
 ಈ ಮೂದಲು ಮ್ಯಾದನೇರಿ ಗ್ರಾಮವು ಬೇವೂರು ಗ್ರಾಮ ಪಂಚಾಯತಿಗೆ ಒಳ್ಳಪಟ್ಟಿತ್ತು ಗ್ರಾಮ ಪಂಚಾಯತಿ ಪುನರ ವಿಂಗಡಣಾ ಸಮಿತಿಯು ನೇಲಜೇರಿ ಗ್ರಾಮವನ್ನು ಗ್ರಾಮ ಪಂಚಾಯತಿ ಕೇಂದ್ರಸ್ಥಾನವನ್ನಾಗಿ ಮಾಡಿ ಮ್ಯಾದನೇರಿ ಗ್ರಾಮವನ್ನು ಈ ಪಂಚಾಯತಿಗೆ ಸೇರಿಸಿರುತ್ತಾg. ಆದರೆ ನೇಲಜೇರಿ ಗ್ರಾಮವು ನಮ್ಮ ಗ್ರಾಮಕ್ಕೆ ೬ ಕೀ.ಮೀ ದೂರವಿದ್ದು ಅಲ್ಲದೆ ಆ ಗ್ರಾಮದಲ್ಲಿ ಯಾವುದೇ ಸೌಲಭ್ಯಗಳು ಇರುವುದಿಲ್ಲಾ. ನಮ್ಮ ಗ್ರಾಮದ ಜನರಿಗೆ ಆ ಪಂಚಾಯತಿಗೆ ಹೋಗಲು ತೊಂದರೆ ಆಗುತ್ತದೆ. ವಟಪರವಿ ಗ್ರಾಮವು ಎಲ್ಲಾ ರೀತಿಯಿಂದ ಮೂಲಭೂತ ಸೌಲಭ್ಯಗಳನ್ನು ಹೊಂದಿರುತ್ತದೆ. ವಟಪರವಿ ಗ್ರಾಮವು ಕೇವಲ ೩ ಕೀ.ಮೀಟರ ಹತ್ತಿರದಲ್ಲಿ ಇರುತ್ತದೆ ಆದ ಕಾರಣ ವಟಪರವಿ ಗ್ರಾಮವನ್ನು ಗ್ರಾಮ ಪಂಚಾಯತಿ ಕೇಂದ್ರಸ್ಥಾನವನ್ನಾಗಿ ಮಾಡಬೇಕೆಂದು ಮ್ಯಾದನೇರಿ ಗ್ರಾಮದ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 
Please follow and like us:
error

Leave a Reply

error: Content is protected !!