You are here
Home > Koppal News > ಡಿ.೦೧ ರಂದು ಹಲಗೇರಿ ಗುರುಮಠದ ಉದ್ಘಾಟನಾ ಕಾರ್ಯಕ್ರಮ

ಡಿ.೦೧ ರಂದು ಹಲಗೇರಿ ಗುರುಮಠದ ಉದ್ಘಾಟನಾ ಕಾರ್ಯಕ್ರಮ

 ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಿರ್ಮಿಸಲಾದ ಗುರುಮಠದ ಉದ್ಘಾಟನೆ ಕಾರ್ಯಕ್ರಮ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಡಿ.೦೧ ಸೋಮವಾರ ಹಮ್ಮಿಕೊಳ್ಳಲಾಗಿದೆ. 
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಲಿದು, ಬೆದವಟ್ಟಿಯ ಶ್ರೀ ೧೦೮ ಷ.ಬ್ರ.ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಟಾಪನೆ ನೇರವೇರಲಿದ್ದು ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು  ಗುರುಮಠದ ಭಕ್ತ ಮಂಡಳಿ  ತಿಳಿಸಿದೆ.

Leave a Reply

Top