ಪ್ರಕೃತಿಯನ್ನು ಪ್ರೀತಿಸುವದನ್ನು ಕಲಿಯಬೇಕು

 ಕೊಪ್ಪಳ :  ನಾವು ನಮ್ಮ ಸ್ವಾರ್ಥದಿಂದಾಗಿ ಸುತ್ತಮುತ್ತಲಿನ ಆರಣ್ಯವನ್ನು ಗಣಿಗಾರಿಕೆಯಿಂದ ಮಣ್ಣನ್ನು  ಕಾರ್ಖಾನೆಗಳಿಂದ ಪರಿಸರವನ್ನು ನಾಶಮಾಡುತ್ತಿದ್ದೇವೆ. ಈ ಸ್ಥಿತಿ ಮುಂದುವರಿದರೆ  ಪ್ರಕೃತಿಯಲ್ಲಿ ವ್ಯತ್ಯಾಸಗಳುಂಟಾಗುತ್ತವೆ.  ಇದನ್ನು ತಪ್ಪಿಸಲು ಮನುಷ್ಯರಾದ ನಾವುಗಳು  ಪ್ರಕೃತಿಯನ್ನು  ಪ್ರೀತಿಸುವದನ್ನು ಕಲಿಯಬೇಕು. ಆನ್ನದಾತ ರೈತನನ್ನು ಜೊತೆಗೆ ಈ ಭೂಮಿಯನ್ನು ಕಾಪಾಡಿ ಭೂಮಿಯ ಸಮತೋಲನ ಕಾಯ್ದುಕೊಂಡಾಗ ಮಾತ್ರ  ಪರಿಸರ ಸಮತೋಲನ ವುಂಟಾಗುತ್ತದೆ. ಎಂದು  ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ  ಡಾ.ಹೀ.ಚಿ. ಬೋರಲಿಂಗಯ್ಯನವರು ಸಂಸ್ಥಾನ  ಶ್ರೀ ಗವಿಮಠದಲ್ಲಿ ಪ್ರತಿ ಅಮವಸ್ಯೆಯ ಅಂಗವಾಗಿ ಜರುಗುವ ಮಾಸಿಕ  ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಮುಂದುವರೆದು ಶ್ರೀಗವಿಮಠದಲ್ಲಿ ನಡೆಯುವ ಈ ಬೆಳಕಿನೆಡೆಗೆ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾದುದೆಂದರು. . ಸಾನಿಧ್ಯವನ್ನು ಗುಡ್ಡದ ವಿರಕ್ತಮಠ ನೀಲಗುಂದದ ಶ್ರೀ.ಮ.ನಿ.ಪ್ರ. ಚನ್ನಬಸವ ಶಿವಯೋಗಿಗಳು ವಹಿಸಿ ಮಾತನಾಡಿದರು.  ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿದವು. ಭಕ್ತಿಸೇವೆಯನ್ನು ಶ್ರೀ/ಶ್ರೀಮತಿ ಲಕ್ಷ್ಮಮ್ಮ ಯಲ್ಲಪ್ಪ ಮಾದಿನೂರ ಹೀರೇಸಿಂಧೋಗಿ ವಹಿಸಿದ್ದರು . ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಭಾಗವಹಿಸಿದ್ದರು

Leave a Reply