ಕೊಪ್ಪಳ ಜಿಲ್ಲಾ ಜೆಡಿಎಸ್ ನಿಂದ ಸತ್ಯಾಗ್ರಹಕ್ಕೆ ಬೆಂಬಲ

ಕೊಪ್ಪಳ : ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ಕೊಪ್ಪಳ ಜಿಲ್ಲೆಯ ಜೆಡಿಎಸ್ ನಿಂದ ರಸ್ತೆ ತಡೆ ನಡೆಸಲಾಯಿತು. ನಂತರ ಮೆರವಣಿಗೆಯಲ್ಲಿ ತೆರಳಿದ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ನಂತರ ಮನವಿ ಅರ್ಪಿಸಿದರು. ಸರಕಾರ ವ್ಯರ್ಥ ಆರೋಪಗಳನ್ನು ಮಾಡುವ ಬದಲು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸತ್ಯವನ್ನು ಎತ್ತಿ ಹಿಡಿಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಕೆ.ಎಂ.ಸಯ್ಯದ್, ಭರಮಣ್ಣ ಲಳಗಿ, ಗವಿಸಿದ್ದಪ್ಪ ಮುಂಡರಗಿ, ಚಂಧ್ರು ಕವಲೂರ, ಪ್ರದೀಪಗೌಡ ಮಾಲಿಪಾಟೀಲ್,ದೇವಪ್ಪ ಕಾಮದೊಡ್ಡಿ, ವಿರೇಶ ಸಾಲೋಣಿ,ಮಾಲತಿ ನಾಯಕ್, ಸಿದ್ದೇಶ ಪೂಜಾರ್, ಪಿ.ಅತ್ತಾರಸಾ, ವಿರೇಶ ಮಹಾಂತಯ್ಯನಮಠ,ಮಲ್ಲಣ್ಣ ಬತ್ತಿ ಸೇರಿದಂತೆ ಹಲವಾರು ಜನ ಪಾಲ್ಗೊಂಡಿದ್ದರು.
Please follow and like us:
error