ಅತಿಥಿ ಬೋಧಕರ ನೇಮಕ : ಅರ್ಜಿ ಆಹ್ವಾನ

 ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅತಿಥಿ ಬೋಧಕರ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ಡಿ.ಜಿ.ಇ.ಟಿ. ನಿಯಮಾವಳಿಯಂತೆ ಡಿಪ್ಲೋಮಾ/ ಬಿ.ಇ. ವಿದ್ಯಾರ್ಹತೆ, ಅನುಭವ ಹೊಂದಿರುವವರನ್ನು ಪರಿಶೀಲಿಸಿ ಅತಿಥಿ ಬೋಧಕರನ್ನಾಗಿ ನೇಮಿಸಲು ಉದ್ದೇಶಿಸಲಾಗಿದೆ.  ಡಿಪ್ಲೋಮಾ/ ಬಿ.ಇ. (ಇಲೆಕ್ಟ್ರಿಕಲ್)- ೦೧ ಹುದ್ದೆ ಹಾಗೂ ಡಿಪ್ಲೋಮಾ /ಬಿ.ಇ. (ಮೆಕ್ಯಾನಿಕಲ್)- ೦೨ ಹುದ್ದೆಗಳನ್ನು ಅತಿಥಿ ಬೋಧಕರನ್ನಾಗಿ ನೇಮಿಸಲಾಗುವುದು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. ೬೦೦೦ ಗೌರವಧನ ನೀಡಲಾಗುವುದು.  ಅಗತ್ಯ ವಿದ್ಯಾರ್ಹತೆ ಹಾಗೂ ಎರಡು ವರ್ಷಗಳ ಅನುಭವವುಳ್ಳ ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ದಾಖಲಾತಿ ಹಾಗೂ ಬಯೋಡಾಟಾದೊಂದಿಗೆ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕುಕನೂರು ಇವರಿಗೆ ಮಾ. ೦೫ ರೊಳಗಾಗಿ ಖುದ್ದಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರವನ್ನು ದೂರವಾಣಿ ಸಂ: ೦೮೫೩೪- ೨೩೦೪೭೦ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Please follow and like us:
error