fbpx

ಯಶಸ್ವಿ ಬೃಹತ್ ಸ್ವಚ್ಚತಾಅಭಿಯಾನಕಾರ್ಯಕ್ರಮ.

ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಕಳೆದ ೪ ವರ್ಷಗಳಿಂದ ಕರ್ನಾಟಕದಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧೀಯೋಜನೆಯ ಮೂಲಕ ರಾಷ್ಟ್ರೀಯ ಹಬ್ಬದ ದಿನದಂದುಜನರನ್ನು ಸಂಘಟಿಸಿ, ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿ, ಶ್ರಮದಾನದಂತಹ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಪ್ರಸ್ತುತ ೬೬ ನೇ ಗಣರಾಜ್ಯೋತ್ಸವದ ಹಂಗವಾಗಿ ಕೊಪ್ಪಳ ತಾಲೂಕಿನಾದ್ಯಂತ ಸ್ವಚ್ಚತಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅದರಂತೆ ಕೊಪ್ಪಳ ನಗರದ ಬನ್ನಿಕಟ್ಟೆ ಹತ್ತಿರವಿರುವ ಶ್ರೀ ಗೌರಿಶಂಕರದೇವಸ್ಥಾನದಲ್ಲಿ   ಚೈತನ್ಯಾನಂದ ಸ್ವಾಮಿಗಳವರು ಕಾರ್ಯಕ್ರಮಗಳಲ್ಲಿ ಮಾತ್ರ ಸ್ವಚ್ಚತೆ ಸೀಮಿತವಾಗದೆ ನಮ್ಮ ದಿನ ನಿತ್ಯಜೀವನದಲ್ಲಿ ಸ್ವಚ್ಚತೆಯನ್ನು ಪರಿಪೂರ್ಣವಾಗಿ ಸ್ವಚ್ಚತೆಯನ್ನು ಅಳವಡಿಸಿಕೊಳ್ಳಬೇಕು. ನಮ್ಮದೇಶವನ್ನು ತೆಗಳುವಂತ ಸ್ಥಿತಿ ಬಾರದಂತೆ ಪ್ರತಿಯೊಬ್ಬರು ಕಾಳಜಿವಹಿಸಿಕೊಳ್ಳಬೇಕೆಂದು ತಿಳಿಸಿದರು.ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಹಮ್ಮಿಕೊಂಡಂತಹ ಈ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಬೃಹತ್ ಸ್ವಚ್ಚತಾಅಭಿಯಾನಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತ್ಯಾಜ್ಯ ವಸ್ತುಗಳ ವಿಲೇವಾರಿ ಸಮರ್ಪಕವಾಗದೆ ರೋಗಗಳ ಬೀತಿ ಉಲ್ಬಣಿಸಿದ್ದು, ಪ್ರತಿಯೊಬ್ಬ ನಾಗರಿಕನು ಈ ಬಗ್ಗೆ ಕಾಳಜಿ ವಹಿಸುವಂತೆ, ಸ್ವಚ್ಚತೆಗೆಆದ್ಯತೆ ನೀಡುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಪ್ರೇರಣೆ ನೀಡಿರುತ್ತಾರೆಂದು ಮುಖ್ಯ ಅಥಿತಿಗಳಾದ ಯೋಜನೆಯ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ   ಕೆ.ಬೂದಪ್ಪಗೌಡರವರು ಸ್ವಚ್ಚತಾ ದೀಕ್ಷೆಯನ್ನು ಬೋದಿಸುತ್ತಾ ಮಾತನಾಡಿದರು.

  ಅಮ್ಜದ್ ಪಟೇಲ್, ನಗರಸಭೆ ಉಪಾಧಕ್ಷರು, ಕೊಪ್ಪಳ,ಡಾ|ಕೆ.ಜಿ, ಕುಲಕರ್ಣೀ, ಹಿರಿಯ ವೈದ್ಯರು,ಕೊಪ್ಫಳ  ಶೀವಸಂಗಪ್ಪ, ಅಧ್ಯಕ್ಷರು, ಆಟೋಚಾಲಕರ ಮತ್ತು ಮಾಲಕರ ಸಂಘ, ಕೊಪ್ಪಳ.ಶ್ರೀ ಹುಸೇನ್ ಸಾಬ್‌ರಾಜೂರು, ವಕೀಲರು, ಕೊಪ್ಪಳ. ಬಸವರಾಜ ವಡಗೇರ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ, ಮೆನೇಜರ್,ಕೊಪ್ಪಳ. ಶ್ರೀ ಮತಿ ಹೇಮಲತಾ ನಾಯಕ, ಮಹಿಳಾ ಭಾರತೀಯಜನತಾ ಪಾರ್ಟಿಯಘಟಕದಅಧ್ಯಕ್ಷರು, ಕೊಪ್ಪಳ. ಶೋಭಾ ನಗರಿ, ಭಾರೀತಿಯಜನತಾ ಪಾರ್ಟಿಯ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರು, ಶ್ರೀ ಕಾಂತ್ ಸಜ್ಜನ್ ಸಮಾಜಕಾರ್ಯ ಸ್ನಾತಕೋತ್ತರ ಪದವಿ ಕಾಲೇಜು, ದದೆಗಲ್,ಕೊಪ್ಪಳಡಾ|| ಶ್ರೀನಿವಾಸ ಹ್ಯಾಟಿ, ರೋಟರಿಕ್ಲಬ್ ಕಾರ್ಯದರ್ಶಿ ಕೊಪ್ಪಳ ಗುಣಾಕರ್.ಕೆ ಹೈ-ಕ ಪ್ರಾದೇಶಿಕ ಕಛೇರಿ, ಯೋಜನಾಧೀಕಾರಿಗಳು, ಕೊಪ್ಪಳ.   ರಾಘವೇಂಧ್ರ ವಲಯದ ಮೇಲ್ವಿಚಾರಕರು, ಮತ್ತು ಸೇವಾಪ್ರತಿನಿಧೀಗಳು, ಸ್ವಸಹಾಯ ಸಂಘಗಳ ಒಕ್ಕೂಟಗಳ ಅಧ್ಯಕ್ಷರು, ಪದಾಧೀಕಾರಿಗಳು ಮತ್ತು ಸರ್ವಸದಸ್ಯರುಗೌರಿ ಶಂಕರದೇವಸ್ಥಾನದಿಂದ ಜಿಲ್ಲಾಡಳಿತ ಕಛೇರಿ  ವರೆಗೆ ಸ್ವಚ್ಚತಾ ಮತ್ತು ಶ್ರಮದಾನ ಮಾಡುವದರಜೊತೆಯಲ್ಲಿಜಾಗೃತಿಯನ್ನು ಮೂಡಿಸಲು ಅಂಗಡಿಗಳಿಗೆ ಕರಪತ್ರಗಳನ್ನು ಹಂಚಿಜಾಥಾಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. 
Please follow and like us:
error

Leave a Reply

error: Content is protected !!