ಕಾತರಕಿ ಗ್ರಾಮದ ಸುತ್ತೆಲ್ಲ ಹಾಲು ಎರೆದ ರೈತರು

ಕಾತರಕಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಪ್ರಯುಕ್ತ ಯುಗಾದಿ ಹಬ್ಬದ ಪಾಢ್ಯದ ದಿನ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಗ್ರಾಮದ ರೈತರು ಗ್ರಾಮದ ಸುತ್ತೆಲ್ಲ ಹಾಲು ಎರೆದರು.
ಶ್ರೀ ಮಾರುತೇಶ್ವರ ಜಾತ್ರೆ ಮತ್ತು ಅವಿನಾಳೇಶ್ವರ ಓಕಳಿ
ಕೊಪ್ಪಳ: ದಿನಾಂಕ ೧೫-೦೪-೨೦೧೩ ರಿಂದ ಮೂರು ದಿನಗಳಕಾಲ ತಾಲೂಕಿನ ಕಾತರಕಿ ಗ್ರಾಮದಲ್ಲಿ  ಶ್ರೀ  ಮಾರುತೇಶ್ವರ ಜಾತ್ರೆ ಮತ್ತು ಅವಿನಾಳೇಶ್ವರ ಓಕಳಿ ಜರುಗುವದು. ದಿನಾಂಕ ೧೫-೦೪-೨೦೧೩ ಸೂಮವಾರದಂದು ಅವಿನಾಳೇಶ್ವರ ಓಕಳಿ, ಸಾಯಂಕಾಲ ಬ್ಯಾಟಿ ಗಿಡ (ಮುಳ್ಳಿನ ಗಿಡದ ಮೆಲೆ ಹಾರುವುದು) ರಾತ್ರಿ ೮:೩೦ ಕ್ಕೆ ಲಘು ರಥೋತ್ಸವ ಜರುಗುವದು. ೧೬-೦೪-೨೦೧೩ ಮಂಗಳವಾರ ಬೆಳಗ್ಗೆ ೬ ಗಂಟೆಯಿಂದ ಶ್ರೀ ಮಾರುತೇಶ್ವರನಿಗೆ ರುದ್ರಾಭಿಷೇಕ ನೆರವೇರುವುದು. ಸಾಯಂಕಾಲ ೫:೩೦ ಕ್ಕೆ ರಥೋತ್ಸವವು ಡೊಳ್ಳು, ಬಾಜಾ ಭಜೆಂತ್ರಿಯೊಂದಿಗೆ ವಿಜ್ರಂಬಣೆಯಿಂದ ಜರುಗುವದು. ಅದೇ ರಾತ್ರಿ ೧೦:೦೦ ಗಂಟೆಗೆ ಶ್ರೀ ಕಾಳಮ್ಮ ದೇವಿ ನಾಟ್ಯ ಸಂಘದವರಿಂದ ‘ಊರಿಗೆ ಕಾಲಿಟ್ಟ ಹುಲಿ’ ಅರ್ಥಾತ ಸೇಡು ಸಾದಿಸಿದ ಸಿಂಹ ಜೋಡಿ ಎಂಬ ಕ್ರಾಂತಿಕಾರಿ ನಾಟಕ ಆಯೋಜಿಸಲಾಗಿದೆ. ಬುಧವಾರ ೧೭-೦೪-೨೦೧೩ ರಂದು ಬೆಳಗ್ಗೆ ೧೦:೦೦ ರಿಂದ ಹೊಂಡಕ್ಕೆ ನೀರು ಹೊರುವುದು, ೧೨ ಗಂಟೆಯಿಂದ ಶ್ರೀ ಮಾರುತೇಶ್ವರ ಬ್ಯಾಟಿ ಗಿಡ, ಸಾಯಂಕಾಲ ೪ ಗಂಟಯಿಂದ ಮುಳ್ಳು ಪಲ್ಲಕ್ಕಿ ಉತ್ಸವ, ಅಗ್ನಿ ಕೊಂಡ, ನೀರು ಕೊಂಡ, ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಮತ್ತು ರಾತ್ರಿ ೯:೩೦ ಗಂಟೆಗೆ ಶ್ರೀ ದುರ್ಗಾ ದೇವಿ ಬೈಲಾಟ ಸಂಘದವರಿಂದ ‘ಕಡ್ಲಿ ಮಟ್ಟಿ ಸ್ಟೇಶನ್ ಮಾಸ್ಟರ್’ ಅರ್ಥಾತ ಶೀಲಕ್ಕಾಗಿ ಶಿಶು ಹತ್ಯೆ ಎಂಬ ಮೂಡಲಪಾಯ ಭಯಲಾಟ ಪ್ರದರ್ಶಿಸಲಾಗುವದು.

Please follow and like us:
error

Related posts

Leave a Comment