ಏಡ್ಸ ಜಾಗೃತಿ ಕಾರ್ಯ ಕ್ರಮ

ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು  ರೆಡ್ ರಿಬ್ಬನ್ ಕ್ಲಬ್ ಕೊಪ್ಪಳ , ಎನ್.ಎಸ್.ಎಸ್.ಘಟಕ  ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ಏಡ್ಸ ಜಾಗೃತಿ ಕಾರ್ಯಕ್ರಮವನ್ನು  ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಭೌತಶಾಸ್ತ್ರ ಉಪನ್ಯಾಸಕ ದಾರುಕಾಸ್ವಾಮಿ  ಏಡ್ಸ   ರೋಗ ತಡೆಗಟ್ಟುವಲ್ಲಿ  ವಿದ್ಯಾರ್ಥಿಗಳು ವಹಿಸಬೇಕಾದ ಪಾvವನ್ನು  ಕುರಿತು ಮಾತನಾಡಿದರು.  
                ವೇದಿಕೆಯಲ್ಲಿ ಎನ್.ಎಸ್.ಎಸ್ ಅಧಿಕಾರಿ ಹಾಗೂ ದೈಹಿಕ ನಿರ್ದೇಶಕಿ ಶೋಭಾ ಕೆ, ಉಪನ್ಯಾಸಕ ನಟರಾಜ ಉಪಸ್ಥಿತರಿದ್ದರು. ಅಧ್ಯಕ್ಷತಡ ವಹಿಸಿ ಪ್ರಾಚಾರ್ಯ  ಶಿವಪ್ಪ ಶಾಂತಪ್ಪನವರು ಮಾತನಾಡಿದರು. ಈ ಕಾರ್ಯಕ್ರಮದ ಅಂಗವಾಗಿ  ನಿನ್ನೆ ಜರುಗಿದ ಪ್ರಬಂಧ ಸ್ಪರ್ಧೇಯಲ್ಲಿ  ಪ್ರಥಮ ಸ್ಥಾನ  ಜ್ಯೋತಿ, ದ್ವೀತಿಯ ಸ್ಥಾನ  ಸುರೇಶ ಹಾಗೂ ತೃತೀಯ ಸ್ಥಾನ ಮಲ್ಲೇಶ  ಮತ್ತು ಭಾಷಣ ಸ್ಪರ್ದೇಯಲ್ಲಿ  ಪ್ರಥಮ ಸ್ಥಾನ ಪಲ್ಲವಿ, ದ್ವೀತಿಯ ಸ್ಥಾನ ಸಂತೋಷ ಸಸಿಮಠ, ತೃತೀಯ ಸ್ಥಾನ  ಮಂಜುನಾಥ  ಪಡೆಇದರು. ವಿಜೇತರರಿಗೆ ಬಹುಮಾನ ಇಲ್ಲಿ ವಿತರಿಸಲಾಯಿತು.  ಇದಾದ ನಂತರ ಏಡ್ಸ ಜಾಗೃತಿ ಜಾಥಾ ಜರುಗಿತು. ಸರ್ವ ಸಿಬ್ಭಂಧಿಗಳು , ವಿದ್ಯಾರ್ಥಿಗಳು ಭಾಗವಹಿಸಿದ್ದರು. 
Please follow and like us:
error