ಗಾಂಧೀಜಿಯವರ ಕಂಡ ಕನಸೇ ಎನ್.ಎಸ್.ಎಸ್

 ; ಪ್ರೊ.ಎಸ್.ಎಲ್ ಮಾಲಿಪಾಟೀಲ
ಕೊಪ್ಪಳ. ಗಾಂಧೀಜಿಯವರ ಕಂಡ ಕನಸು ಇಂದು ಎನ್.ಎಸ್.ಎಸ್ ರೂಪದಲ್ಲಿ ಜನಿಸಿ ದೇಶದಲ್ಲಿ ಅಪಾರ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಎಲ್.ಮಾಲೀಪಾಟೀಲ್ ಅವರು ನುಡಿದರು. ಅವರು ಶ್ರೀ ಗವಿಸಿದ್ದೇಶ್ವರ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳಿಂದ ಹಮ್ಮಿಕೊಂಡಿದ್ದ ಮಹತ್ಮಾ ಗಾಂಧೀಜಿ ಜಯಂತಿ ಮತ್ತು ಶ್ರಮದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಮುಂದುವರೆದು ಮಹಾತ್ಮ ಗಾಂಧೀಜಿಯವರು ದೀನ-ದಲಿತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು, ಅಹಿಂಸಾ ತತ್ವವನ್ನು ದೇಶದೆಲ್ಲೆಡೆ ಪ್ರತಿಪಾದಿಸಿದರು. ಸ್ವಾತಂತ್ರ್ಯದ ಕಿಡಿಯನ್ನು ಜನರಲ್ಲಿ ಹಚ್ಚಿದರು ಎಂದು ನುಡಿದರು. ಆರಂಭದಲ್ಲಿ ಪದವಿ ಮಹಾವಿದ್ಯಾಲಯದ  ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ.ಎಂ.ಎಂ ಕಂಬಾಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ.ಶರಣಬಸಪ್ಪ ಬಿಳಿಎಲೆ ಮತ್ತು ಪದವಿ ಪೂರ್ವ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಉಪಸ್ಥಿತರಿದ್ದರು.    
ಕುಮಾರ ದೇವರಾಜರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ನಿಂಗಜ್ಜ ಅಳ್ಳಳ್ಳಿ   ಸ್ವಾಗತಿಸಿದರೆ ಕೊನೆಗೆ ವಿರೂಪಾಕ್ಷ ಬಿ.ಕೆ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ರೆಡ್ಡೆಪ್ಪ ಮತ್ತು ವೆಂಕಟೇಶ ಡಿ.ಎಚ್ ನೆರವೇರಿದರು. ನಂತರ ಸುಮಾರು ೨-೩ಗಂಟೆಗಳ ಕಾಲ ಎನ್.ಎಸ್.ಎಸ್ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.
Please follow and like us:
error