fbpx

ಸ್ಥಳಿಯ ಸಂಸ್ಥೆ ಸದಸ್ಯರುಗಳಿಗೆ ಕಾರ್ಯಕ್ರಮದ ಪರಿಚಯ

ಶ್ರಿಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಅಡಿಯಲ್ಲಿ  ಸ್ಥಳಿಯ ಸಂಸ್ಥೆ ಸದಸ್ಯರುಗಳಿಗೆ ಕಾರ್ಯಕ್ರಮದ ಪರಿಚಯ ಹಾಗೂ ಕ್ಷೇತ್ರಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು
ಕೊಪ್ಪಳ : ಇತ್ತಿಚೆಗೆ ನಗರಸಭೆ ಸಬಾಂಗಣದಲ್ಲಿ ಶ್ರಿಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಅಡಿಯಲ್ಲಿ  ಸ್ಥಳಿಯ ಸಂಸ್ಥೆ ಸದಸ್ಯರುಗಳಿಗೆ ಕಾರ್ಯಕ್ರಮದ ಪರಿಚಯ ಹಾಗೂ ಕ್ಷೇತ್ರಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಣೆಯನ್ನು ಕೊಪ್ಪಳ ಶಾಸಕ  ಕೆ. ರಾಘವೇಂದ್ರ ಹಿಟ್ನಾಳ ನೆರವೇರಿಸಿ ಮಾತನಾಡುತ್ತಾ, ಒಳಚರಂಡಿ ಕಾಮಗಾರಿಯನ್ನು ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಮತ್ತು ವಾರ್ಡ ಮಟ್ಟದಲ್ಲಿ ಎಲ್ಲಾ ರಿತಿಯ ಸುದಾರಣೆ ಮತ್ತು ಸ್ವಚ್ಚತೆಯನ್ನು ಮಾಡಿ. ಶೌಚಾಲಯ ನಿರ್ಮಿಸಿಕೊಡಲು ಕರೆ ನೀಡಿದರು, ದೂಳ ಮುಕ್ತ ನಗರವನ್ನಾಗಿ ಮಾಡಲು ಎಲ್ಲಾ ನಗರ ಸಭೆ ಸದಸ್ಯರುಗಳು ಸರ್ವ ನಾಗರಿಕರು ಬರುವಂತ ಯೋಜನೆಗಳಿಗೆ ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷರಾದ ಶ್ರಿಮತಿ ಲತಾ ವೀರಣ್ಣ ಸಂಡೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಾಕೀರ ಹುಸೇನ್ ವಾಲಿಕಾರ ಮಾತನಾಡಿ, ಪಿ.ಯು.ಐ.ಡಿ ಎಫ್.ಸಿ ಈ ಯೋಜನೆಯ ಕರ್ನಾಟಕ ಸರಕಾರದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಈ ಏಶಿಯನ್ ಭಿವೃದ್ದಿ ಬ್ಯಾಂಕನಿಂದ ಸಹಾಯ ತೆಗೆದುಕೊಂಡು ಈ ಯೋಜನೆಯನ್ನು ಕೊಪ್ಪಳದಲ್ಲಿ ಅನಿಷ್ಠಾನ ಮಾಡಲಾಗುತ್ತಿದೆ. ಈ ಯೋಜನೆ ಈಗಾಗಲೇ ಬೆಳಗಾವಿ, ಹುಬ್ಬಳ್ಳಿ, ಗುಲಬರ್ಗಾ, ಬಳ್ಳಾರಿ, ಈ ಯೋಜನೆಯನ್ನು ಕಾನೂನಿನ ಅಡಿಯಲ್ಲಿ ಕಾಮಗಾರಿಯನ್ನು ಮಾಡಲಾಗುತ್ತಿದೆ. ಮತ್ತು ನೀರಿನ ಮಿತವ್ಯಯದ ಬಗ್ಗೆ ಮಾತನಾಡಿ ಕೊಪ್ಪಳನಗರದಲ್ಲಿ ಶೇ ೪೦ ರಷ್ಟು ನೀರನ್ನು ಮಾತ್ರ ಪಡೆದುಕೋಳ್ಳುತ್ತಾರೆ ಉಳಿದ ೬೦ ರಷ್ಟು ನೀರು ನಿರುಪಯುಕ್ತ ವಾಗುತ್ತಿದೆ. ಇದರ ಸದೂಪಯೋಗ ಪಡೆದುಕೋಳ್ಳಲಿಕ್ಕೆ ಜನರಲ್ಲಿ ಜಾಗೃತಿ ಕಲಾರ್ಯಕ್ರಮ ಸಂಘ ಸಂಸ್ಥೆಗಳ ಮುಖಾಂತರ ಹಮ್ಮಿಕೊಳ್ಳಳಾಗುತ್ತಿ

ದೆ. ಅಮ್ಜದ ಪಾಟೀಲ, ರಾಮಣ್ಣ ಹದ್ದಿನ, ಗವಿಸಿದ್ದಪ್ ಮುದಗಲ್, ರುದ್ರಮುನಿ, ಸುನೀಲಕುಮಾರ ಗಿರಡ್ಡಿ, ಶ್ರೀಮತಿ ಪ್ರತಿಭಾ, ರಪೀಖ್ ಅಹ್ಮದ್ ದಫೇದಾರ, ಎಸ್. ಬಿ. ನಾಗರಾಳ, ಮುಂತಾದವರು ಉಪಸ್ಥಿತರಿದ್ದರು.

ಸುನೀಲ ಗಿರಡ್ಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರಕಾರ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಸಂಸ್ಥೆ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಯೋಜನೆಯ ಅಡಿಯಲ್ಲಿ ಬರುವ ಸೌಕರ್ಯಗಳ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಏಡಿಬಿ ನೆರವಿನ ಅಡಿಯಲ್ಲಿ ಈ ಯೋಜನೆಯನ್ನು ೨೪ ನಗರಗಳಲ್ಲಿ ಹಮ್ಮಿಕೊಂಡಿದ್ದು ಕೊಪ್ಪಳ ನಗರದಲ್ಲಿ ಈ ಯೋಜನೆ ಅನುಷ್ಠಾನ ಗೊಳ್ಳುತ್ತಿದ್ದು ಇದರಲ್ಲಿ ಬರುವಂತ ಸೌಲಭ್ಯಗಳ ಬಗ್ಗೆ ನಗರಸಭೆಯ ಸರ್ವಸದಸ್ಯರು ಹಾಗೂ ನಗರದ ಸಾರ್ವಜನಿಕರು ಸಹಕಾರದಿಂದ ಈ ಯೋಜನೆಯನ್ನು ಸಫಲ ಮಾಡಿಕೊಳ್ಳಬೇಕೆಂದರು. 
ಯೋಜನಾಧಿಕಾರಿಗಳಾದ ವಜೀರಸಾಬ ಎಚ್ ತಳಕಲ್ ಸ್ವಾಗತಿಸಿ ವಂದಿಸಿದರು. 
Please follow and like us:
error

Leave a Reply

error: Content is protected !!