ಕೊಪ್ಪಳ ಕೇಂದ್ರ ಬರ ಅಧ್ಯಯನ ತಂಡದಿಂದ ಪರಿಶೀಲನೆ-ಬರ ತೀವ್ರತೆ ಮನವರಿಕೆ.

ಕೊಪ್ಪಳ, ಸೆ.೧೦ (ಕ ವಾ) ಕೇಂದ್ರ ಹಣಕಾಸು ಸಚಿವಾಲಯದ (ವೆಚ್ಚ) ಎಸ್‌ಎಸ್‌ಓ ಅಧಿಕಾರಿ ಆರ್.ಬಿ. ಕೌಲ್ ಹಾಗೂ ಕೇಂದ್ರ ನೀತಿ ಆಯೋಗದ ಡೆಪ್ಯುಟಿ ಅಡ್ವೈಸರ್ ಮನೀಷ್ ಚೌದರಿ ಅವರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರದಂದು ಕೊಪ್ಪಳ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.
     ಶುಕ್ರವಾರದಂದು ಮುಂಜಾನೆಯಿಂದಲೇ ಬರ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲು ತೆರಳಿದ ಕೇಂದ್ರ ಅಧ್ಯಯನ ತಂಡಕ್ಕೆ ತಾಲೂಕಿನ ಟಣಕನಕಲ್ ಗ್ರಾಮದ ಬಳಿ ರೈತರು ಭೇಟಿಯಾಗಿ, ಮಳೆಯ ಕೊರತೆಯಿಂದ ಬೆಳೆ ಹಾನಿಯಾದ ಬಗ್ಗೆ, ಬೆಳೆಯ ಪೈರುಗಳನ್ನು ತೋರಿಸಿ, ಬರದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.  ನಂತರ ಇರಕಲ್ಲಗಡ ಗ್ರಾಮ ಬಳಿಯ ಹೊಲಗಳಿಗೆ ಭೇಟಿ ನೀಡಿದ ತಂಡ, ಇಲ್ಲಿನ ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಬೆಳೆ ಹಾನಿಯ ಬಗ್ಗೆ ಪರಿಶೀಲನೆ ನಡೆಸಿತು.  ಇಲ್ಲಿನ ರೈತರಾದ ಬಸಪ್ಪ ಪಟ್ಟಣಶೆಟ್ಟಿ, ರಾಮಣ್ಣ ಪಿನ್ನಿ, ಫಕೀರಪ್ಪ ಗದ್ದಿಗಿ ಸೇರಿದಂತೆ ಹಲವು ರೈತರು ಮಳೆಯಿಲ್ಲದೆ ಹಾಳಾಗಿದ್ದ ಬೆಳೆಗಳನ್ನು ತೋರಿಸಿ, ವಿವರವನ್ನು ಒದಗಿಸಿದರು.  ನಂತರ ಚಿಲಕಮುಖಿ ಗ್ರಾಮಕ್ಕೆ ತೆರಳಿದ ತಂಡ ಇಲ್ಲಿಯೂ ಬೆಳೆ ಹಾನಿಯಾದ ಬಗ್ಗೆ ರೈತರಿಂದ ಮಾಹಿತಿ ಸಂಗ್ರಹಿಸಿತು.  ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವಾಲಯದ (ವೆಚ್ಚ) ಎಸ್‌ಎಸ್‌ಓ ಅಧಿಕಾರಿ ಆರ್.ಬಿ. ಕೌಲ್ ಅವರು, ಗುರುವಾರದಂದು ಜಿಲ್ಲೆಯ ತಾವರಗೇರಾ, ಹುಲಿಹೈದರ ಹಾಗೂ ಕನಕಗಿರಿ ಗ್ರಾಮಗಳಲ್ಲಿ ಭೇಟಿ
     ಕೇಂದ್ರ ನೀತಿ ಆಯೋಗದ ಡೆಪ್ಯುಟಿ ಅಡ್ವೈಸರ್ ಮನೀಷ್ ಚೌದರಿ ಅವರು ಬರ ಪರಿಸ್ಥಿತಿ ಪರಿಶೀಲನೆ ವೇಳೆಯಲ್ಲಿ ರೈತರೊಂದಿಗೆ ಮಾತನಾಡಿ, ಮಾಹಿತಿ ಪಡೆದುಕೊಂಡರು.  ಜಿಲ್ಲಾಧಿಕಾರಿ ರಮಣದೀಪ್ ಚೌಧರಿ, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್‌ಕುಮಾರ ಜಿ.ಎಲ್., ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ಜಂಟಿಕೃಷಿ ನಿರ್ದೇಶಕ ರಾಮದಾಸ್, ಉಪಕೃಷಿ ನಿರ್ದೇಶಕ ವಿರೇಶ್ ಹುನಗುಂದ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ತಹಸಿಲ್ದಾರ್ ಪುಟ್ಟರಾಮಯ್ಯ ಅವರು ಕೇಂದ್ರ ಅಧ್ಯಯನ ತಂಡದೊಂದಿಗೆ ಉಪಸ್ಥಿತರಿದ್ದು, ಅಗತ್ಯ ಮಾಹಿತಿಯನ್ನು ಒದಗಿಸಿಕೊಟ್ಟರು.

ನೀಡಿ ಬರ ಪರಿಸ್ಥಿತಿಯನ್ನು ಗಮನಿಸಲಾಗಿದೆ.  ಅಲ್ಲದೆ ಕನಕಗಿರಿ ಗ್ರಾಮದ ಗೋಶಾಲೆಗೆ ಭೇಟಿ ನೀಡಿ, ಅಲ್ಲಿಯೂ ರೈತರೊಂದಿಗೆ ಮಾಹಿತಿ ಪಡೆದುಕೊಳ್ಳಲಾಗಿದೆ.  ಇಂದು ಸಹ ವಿವಿಧೆಡೆ ಭೇಟಿ ನೀಡಿ,  ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಬೆಳೆಗಳು ಹಾಳಾಗಿರುವುದು ಕಂಡುಬಂದಿದೆ.  ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ರೈತರಿಗೆ ಯಾವುದೇ ಪ್ರಯೋಜನ ತಂದಿಲ್ಲ.  ಜಿಲ್ಲೆಯ ಬರ ಪರಿಸ್ಥಿತಿ ಮನವರಿಕೆಯಾಗಿದ್ದು, ಸಂಗ್ರಹಿತ ವರದಿಯನ್ನು ಸರ್ಕಾರಕ್ಕೆ ಶೀಘ್ರ ಸಲ್ಲಿಸಲಾಗುವುದು ಎಂದರು.

Please follow and like us:
error