ಕೊಪ್ಪಳ ಅಡುಗೆ ಅನಿಲ ಸಂಪರ್ಕಕ್ಕೆ ಅರ್ಜಿ ಆಹ್ವಾನ.

ಕೊಪ್ಪಳ,
ಜ.೨೯ (ಕ ವಾ)ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ
ಅನುದಾನದಡಿಯ ಶೇಕಡಾ ೨೪.೧೦ ಯೋಜನೆಯಡಿ ನಗರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದ ಅಭ್ಯರ್ಥಿಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ
ಆಹ್ವಾನಿಸಲಾಗಿದೆ.
     ಯೋಜನೆಯಡಿ ಕೊಪ್ಪಳ ನಗರ ಪ್ರದೇಶದ ವಾಸಿಯಾಗಿರುವ
ಪರಿಶಿಷ್ಟ ಜಾತಿಯ ೨೩ ಹಾಗೂ ಪರಿಶಿಷ್ಟ ಪಂಗಡದ ೨೫ ಜನರಿಗೆ ಮಾತ್ರ ಈ ಸೌಲಭ್ಯವನ್ನು
ನೀಡಲಾಗುತ್ತ್ತದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಭರ್ತಿ ಮಾಡಿದ ಅರ್ಜಿಯೊಂದಿಗೆ ಚಾಲ್ತಿ
ಸಾಲಿನ ಆಸ್ತಿ ತೆರಿಗೆ ನಮೂನೆ-೩ (ಅರ್ಜಿ ಹಾಕುವವರ ಹೆಸರಿನಲ್ಲಿರತಕ್ಕದ್ದು, ಬಾಡಿಗೆ
ಮನೆಯಾಗಿದ್ದಲ್ಲಿ ಮಾಲೀಕರಿಂದ ೨೦ ರೂ.ಗಳ ಛಾಪಾ ಕಾಗದದ ಮೇಲೆ ನೋಟ್ರಿಯೊಂದಿಗೆ ಒಪ್ಪಿಗೆ
ಪತ್ರ), ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಆದಾರ್ ಮತ್ತು
ರೇಷನ್ ಕಾರ್ಡ್, ೨೦ ರೂ.ಗಳ ಛಾಪಾ ಕಾಗದ, ೦೩ ಫೋಟೋ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ
ಚಾಲ್ತಿ ವಿದ್ಯುತ್ ಪಾವತಿ ರಸೀದಿ ಇತ್ಯಾದಿ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ
ದೃಢೀಕರಿಸಿ ಲಗತ್ತಿಸಿ, ದ್ವಿಪ್ರತಿಯೊಂದಿಗೆ ಫೆ.೧೫ ರೊಳಗಾಗಿ ಕೊಪ್ಪಳ ನಗರಸಭೆ
ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಯಾವುದೇ ಹಿಂಬರಹ
ನೀಡದೆ ತಿರಸ್ಕರಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯ,
ಕೊಪ್ಪಳ, ದೂರವಾಣಿ ಸಂಖ್ಯೆ: ೦೮೫೩೯-೨೩೦೧೯೨ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು
ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ತಿಳಿಸಿದ್ದಾರೆ.
Please follow and like us:
error