ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ; ಶಾಸಕ ಹಿಟ್ನಾಳ

ಕೊಪ್ಪಳ,ಸೆ,೨೪: ಕಳೆದ ಸಾರ್ವತ್ರಿಕ ಕರ್ನಾಟಕ ವಿದಾನ ಸಭೆಯ ಚುನಾವಣೆಗಳಲ್ಲಿ ಹೇಳಿದಂತೆ ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವದರ ಮೂಲಕ ಈ ನಾಡಿನ ಜನ ಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ ನಮ್ಮ ಕಾಂಗ್ರೆಸ್  ನುಡಿದಂತೆ ನಡೆಯುವ ಎಕೈಕ ಪಕ್ಷವಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
 ಅವರು ಇದೇ ದಿ.೨೯ರಂದು ಜರುಗಲಿರುವ ತಾಲೂಕಿನ ಹಿಟ್ನಾಳ ಕ್ಷೇತ್ರದ ಜಿ.ಪಂ.ಉಪ ಚುನಾವಣೆಯಲ್ಲಿ ಕಾಂಗ್ರೆಸ್
ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ,ರಮೇಶ ಹಿಟ್ನಾಳ ರವರ ಪರ ಮಂಗಳವಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಸನಕಂಡಿ, ಅಲ್ಲಾ ನಗರ, ಹಿರೇಬಾಗನಾಳ ಇತ್ಯಾದಿ ಗ್ರಾಮಗಳಲ್ಲಿ ಮಿಂಚಿನ ಪ್ರಚಾರ ಮತ್ತು ಮನೆ ಮನೆಗೆ ತೆರಳಿ ಭಾರಿ ಮತ ಯಾಚನೆ ಮಾಡಿದ ಬಳಿಕ ಅಲ್ಲಾನಗರ ಗ್ರಾಮದಲ್ಲಿ ಏರ್ಪಡಿಸಿದ ಸಾರ್ವಜನಿಕರ ಭಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದರು.
   ಮುಂದುವರೆದು ಮಾತನಾಡಿದ ಅವರು ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅದನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಈ ಕ್ಷೇತ್ರದ ಜನತೆ ನನಗೆ ಅಧಿಕ ಮತಗಳನ್ನು ನೀಡುವುದರ ಮೂಲಕ ಬೆಂಬಲಿಸಿದ್ದರು. ಅದರಂತೆ ಈ ಬಾರಿ ಸದರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ರಮೇಶ ಹಿಟ್ನಾಳ ರವರನ್ನು ಸಹ ಗೆಲ್ಲಿಸಬೇಕೆಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. 
  ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ಜನಾರ್ಧನ ಹಲುಗಿ, ಯುವ ನಾಯಕ ಗೊಳಪ್ಪ ಹಲಗೇರಿ, ಮುಂಖಢರಾದ ಮರ್ದಾನಪ್ಪ ಬಿಸರಳ್ಳಿ, ಯಂಕಣ್ಣ ಹೊಸಳ್ಳಿ, ಗ್ರಾ.ಪಂ.ಆಧ್ಯಕ್ಷ ಬಸವರಾಜ್, ಭರಮಣ್ಣ ಹುರಳ್ಳಿ, ಈಶಪ್ಪ ಆರಾಳ್ಳ, ಶೇಖಪ್ಪ, ಶರಣಪ್ಪ ಆನೆಗುಂದಿ, ವೀರಭದ್ರಪ್ಪ.ಬಿ.ಅಗಳಕೇರಿ ಸೇರಿದಂತೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
Please follow and like us:
error