ಕೆ.ಜೆ.ಪಿ ಯ ಬಸವರಾಜ ದಡೇಸಗೂರ ಭಾರತೀಯ ಜನತಾ ಪಕ್ಷಕ್ಕೆ ಸೆರ್ಪಡೆ

ಕೊಪ್ಪಳ :- ೦೭ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕೆ.ಜೆ.ಪಿ ಪಕ್ಷದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಬಸವರಾಜ ದಡೇಸಗೂರ ಮತ್ತು ಕನಕಗಿರಿ ಮಂಡಲದ ಕೆ.ಜೆ.ಪಿ ಯ ಅಧ್ಯಕ್ಷ ಬೂದಗಿರಿಯಪ್ಪ ಹೊನ್ನಪ್ಪ ಮಡಿವಾಳರ, ಬಾಳಪ್ಪ ಮಹಾಂತಪ್ಪ ಹೂಗಾರ, ಗುರುಸಿದ್ದಪ್ಪ ಯರಕಲ್, ಅಶೋಕ ಉಮಾವಟಿ, ಇನ್ನಿತರರು ಬಸವರಾಜ ದಡೆಸಗೂರ ರವರ ಅಪಾರ ಬೆಂಬಲಿಗರು ಕೊಪ್ಪಳ ಜಿ

ಲ್ಲಾ ಭಾರತೀಯ ಜನತಾ ಪಕ್ಷ ಅಧ್ಯಕ್ಷ ಮಾಜಿ ಶಾಸಕರಾದ ಸಂಗಣ್ಣ ಕರಡಿ ನೇತೃತ್ವದಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷ ಅಧ್ಯಕ್ಷರಾದ  ಮತ್ತು ಸಂಸದರಾದ ಪ್ರಹ್ಲಾದ ಜೋಷಿ ಇತರ ನಾಯಕರ ಸಮ್ಮುಖದಲ್ಲಿ ಕೆ.ಜೆ.ಪಿ ಪಕ್ಷ ತೋರೆದು ಭಾರತೀಯ ಜನತಾ ಪಕ್ಷಕೆ ಸೆರ್ಪಡೆಗೊಂಡರು.

ಈ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕ ಭಾರತೀಯ ಜನತಾ ಪಕ್ಷದ ಉಸ್ತುವಾರಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತ ಸದಸ್ಯರಾದ ಅಮರನಾಥ ಪಾಟೀಲ, ಮಾಜಿ ಸಚಿವರಾದ ರೇವುನಾಯಕ ಬೆಳಮಗಿ, ವಿಧಾನ ಪರೀಷತ್ತ ಸದಸ್ಯರ ರಘುನಾಥ ಮಲಕಾಪುರೆ, ಜಿಲ್ಲಾ ಮುಖಂಡರಾದ ಕೊಲ್ಲಿ ನಾಗೇಶ್ವರಾವ್ ಗಂಗಾವತಿ, ಜಿಲ್ಲಾ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ನರಸಿಂಗರಾವ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು ಎಂದು ಜಿಲ್ಲಾ ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ ಪರಮಾನಂದ ಯಾಳಗಿ  ತಿಳಿಸಿದ್ದಾರೆ.  
Please follow and like us:
error