fbpx

ವಿದ್ಯಾವಿಕಾಸ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪ್ರತಿಭಾ ಕಾರಂಜಿ

ಕೊಪ್ಪಳ : ದಿ: ೨೭.೧೧.೨೦೧೨ ರಂದು ವಿದ್ಯಾವಿಕಾಸ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕೊಪ್ಪಳ ಉತ್ತರ ಕ್ಲಸ್ಟರ ಹಂತದ   ನಡೆಯಿತು.
    ಅಧ್ಯಕ್ಷತೆಯನ್ನು ವಿದ್ಯಾವಿಕಾಸ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ ವಹಿಸಿದ್ದರು. ಉದ್ಘಾಟನೆಯನ್ನು ತಾಲೂಕಾ ಪಂಚಾಯತ ಸದಸರಾದ ದಾನಪ್ಪ ಕವಲೂರು ಹಾಗೂ ಶ್ರೀನಿವಾಸ ಹ್ಯಾಟಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಬಾಯಿ, ಬಾಲಚಂದ್ರ ಸಾ ಬಾವಿಕಟ್ಟಿ, ಗ್ರಾ.ಪಂ. ಸದಸ್ಯರಾದ ರಮೇಶ ಹ್ಯಾಟಿ, ಚಂದ್ರ ಉಂಕಿ, ಹುಲಿಗೆಮ್ಮ ನಾಯಕ, ಹಿರಿಯ ಸಾಹಿತಿಗಳಾದ ವಿಟ್ಟಪ್ಪ ಗೋರಂಟ್ಲಿ, ಪ್ರಹಲ್ಹಾದ ಅಗಡಿ, ಪ್ರಾ. ಶಾ. ಶಿ. ಸಂ. ಪ್ರದಾನ ಕಾರ್ಯದರ್ಶಿ ಸುಭಾಷ ರಡ್ಡಿ, ಬಸವರಾಜ ಬಂಡಿಹಾಳ, ನಾಗರಾಜ ಕುಷ್ಟಗಿ ಇವರು ಹಾಜರಿದ್ದರು. ಪ್ರಾರ್ಥನೆಯನ್ನು ಶಿಕ್ಷಕಿ ನೆರವೆರಿಸಿದರು. ಹಾಗೂ ನಾಡಗೀತೆಯನ್ನು ಸರಕಾರಿ ಪದವಿಪೂರ್ವ ಕಾಲೇಜಿನ ಅಂಬಣ್ಣ ಕೊಪ್ಪದ ಹಾಗೂ ಸಂಘಡಿಗರು ನೆರವೇರಿಸಿದರು.  ವೀರೇಶ ಕರಮುಡಿ ಸಮೂಹ ಸಂಪನ್ಮೂಲ ವ್ಯಕ್ತಿ ಇವರು ಸ್ವಾಗತ ಮಾಡಿದರು.  ಕಾರ್ಯಕ್ರಮ ನಿರೂಪಣೆಯನ್ನು ವೀರೇಶ ಹುಲ್ಲೂರ. ವಂದನಾರ್ಪಣೆಯನು ವಾದಿರಾಜ ದೇಸಾಯಿ ನೆರವೇರಿಸಿದರು.

Please follow and like us:
error

Leave a Reply

error: Content is protected !!