fbpx

ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಶಾಸಕರು ಬೇಟಿ.

ಕೊಪ್ಪಳ:೦೭, ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಬೆಳೆಗ್ಗೆ ೧೦ ಘಂಟೆಗೆ ಕೊಪ್ಪಳದ ಶಾಸಕರು ಕೆ.ರಾಘವೇಂದ್ರ ಹಿಟ್ನಾಳರವರು ಬೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ವೀಕ್ಷಿಸಿ ಮರದ ಕೆಳಗಡೆ ಮಕ್ಕಳಿಗೆ ಪಾಠಮಾಡುವುದನ್ನು ಗಮನಿಸಿದರು. ಹಾಗೂ ವಿದ್ಯಾರ್ಥಿಗಳ ಜೋತೆಗೆ ನೇರ ಸಂವಾದ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ ಶೀಘ್ರವಾಗಿ ಮಕ್ಕಳ ಸಮಸ್ಯೆಗಳನ್ನು ನಿವಾರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ರೂ. ೪೦ ಲಕ್ಷಗಳಲ್ಲಿ ಕೊಠಡಿಗಳ ಮೇಲ್ ಚಾವಣೆ ದುರಸ್ಥಿಗೆ ಮಂಜೂರು ಮಾಡಿದ್ದು, ನೂತನವಾಗಿ ಎಮ್.ಎಸ್.ಡಿ.ಪಿ ಯೋಜನೆ ಅಡಿಯಲ್ಲಿ ೦೮ ಕೊಠಡಿಗಳು ಹೊಸದಾಗಿ ನಿರ್ಮಿಸಲು ರೂ.೨೫ ಲಕ್ಷಗಳು ಮಂಜೂರಾಗಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.  ಈ ಸಂದರ್ಭದಲ್ಲಿ ದ್ಯಾಮಣ್ಣ ಚಿಲವಾಡಗಿ, ಮಾನ್ವಿ ಪಾಷಾ, ಡಿ.ಡಿ.ಪಿ.ಐ. ಶಾಮಸುಂದರ, ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಿ.ಬಿ.ರೆಡ್ಡೆರ, ಶಿಕ್ಷಕರಾದ ಶಂಬುಲಿಂಗನಗೌಡ ಹಲಗೇರಿ, ಶಿವಾನಂದ ಹೂದ್ಲೂರು, ನಿರ್ಮಿತಿ ಅಭಿಯಂತರರು, ಭೂಸೇನಾ ನಿಗಮದ ಅಧಿಕಾರಿಗಳು, ಮಹೇಬುಬ ಮಚ್ಚಿ, ಹಾಜಿ ಹುಸ್ಸೇನಿ, ಅರುಣ ಶೆಟ್ಟಿ, ಹನುಮೇಶ ಹೊಸಹಳ್ಳಿ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!