ಅಣಬೆ ಕೃಷಿ ತರಬೇತಿ ಕಾರ್ಯಕ್ರಮ.

ಕೊಪ್ಪಳ ಡಿ. ೦೯ (ಕ ವಾ) ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕರ್ಕಿಹಳ್ಳಿ ಮತ್ತು ಕೊಪ್ಪಳದ ರೈತರಿಗೆ ಮತ್ತು ರೈತಮಹಿಳೆಯರಿಗೆ ಅಣಬೆ ಕೃಷಿಯ ಬಗ್ಗೆ ಒಂದು ದಿನದ ತರಬೇತಿ ನೀಡಲಾಯಿತು.
     ಈ ಕಾರ್ಯಕ್ರಮದಲ್ಲಿ ಗೃಹವಿಜ್ಞಾನ ವಿಷಯ ತಜ್ಞರಾದ ಕವಿತಾ ಉಳ್ಳಿಕಾಶಿಯವರು ಅಣಬೆ ಬೇಸಾಯ, ಮೌಲ್ಯವರ್ಧನೆ, ಪೌಷ್ಠಿಕತೆಯ ಮಹತ್ವ ಮತ್ತು ಅಣಬೆ ತಳಿಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಅಣಬೆ ಬೆಳೆಯಲು ಬೇಕಾದ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.

Related posts

Leave a Comment