fbpx

ದಿ.೭ರಿಂದ ಕೌತಾಳಂ ಖಾದರಲಿಂಗಬಾಬಾ ಉರುಸು ಆಚರಣೆ

 ಪಕ್ಕದ ಆಂದ್ರ ಪ್ರದೇಶದ ಐತಿಹಾಸಿಕ ಪ್ರಸಿದ್ಧ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಕೌತಾಳಂ ಶರೀಫ ದರ್ಗಾ ಹಜರತ್ ಖಾದರಲಿಂಗಬಾಬಾ ರವರ ೩೧೦ನೇ ಉರುಸು ಆಚರಣೆ ಕಾರ್ಯಕ್ರಮ ದಿ.೦೭,೦೮,೦೯ ಹಾಗೂ ೧೦ರಂದು ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ನಾಲ್ಕು ದಿನಗಳಕಾಲ ಉರುಸು ಆಚರಣೆ ಕೌತಾಳಂದಲ್ಲಿ ಜರುಗಲಿದೆ.
   ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯ ಆದೋನಿ ತಾಲೂಕಿನ ಕೌತಾಳಂ ಗ್ರಾಮದ ಖಾದರಲಿಂಗಬಾಬಾ ದರ್ಗಾದ ಪೀಠಾಧಿಪತಿ ಹಜರತ್ ಖಾಜಾ ಸಯ್ಯದ್ ಷಾ ಬುರಾನುಲ್ಲಾ ಮೊಹಮ್ಮದ್ ಮೊಹಮ್ಮದುಲ್ ಹುಸೇನಿ ಚಿಶ್ತಿ ಖಾದ್ರಿ ಲಿಂಗಬಂದ್ ಜಗದ್ಗುರು ಜಾಗಿರ್ದಾರ್ ಧರ್ಮಕರ್ತರು ರವರ ದಿವ್ಯಸಾನಿಧ್ಯದಲ್ಲಿ ನಾಲ್ಕುದಿನಗಳಕಾಲ ಉರುಸು ಆಚರಣೆ ನಡೆಯಲಿದ್ದು ದಿ.೭ರಂದು ಗಂಧ, ೦೮ರಂದು ಉರುಸು, ೦೯ರಂದು ಅನ್ನ ಸಂತರ್ಪಣೆ ಹಾಗೂ ೧೦ರಂದು ಜೀಯಾರತ್ ಕಾರ್ಯಕ್ರಮ ಧಾರ್ಮಿಕ ವಿಧಿ,ವಿಧಾನಗಳ ಮೂಲಕ ಜರುಗಲಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಖಾದರಲಿಂಗಬಾಬಾ ರವರ ಆಶಿರ್ವಾದ ಪಡೆಯಬೇಂದು ಪ್ರಕಟನೆಯಲ್ಲಿ ಉರುಸು ಆಚರಣಾ ಸಮಿತಿ ಸಂಘಟಕರು ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
Please follow and like us:
error

Leave a Reply

error: Content is protected !!