ಜನಧನ ಯೋಜನೆ : ಖಾತೆ ತೆರೆಯಲು ವಾರ್ಡ್‌ವಾರು ಬ್ಯಾಂಕ್ ನಿಗದಿ

 ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನಧನ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯಲು ನಗರ ಹಾಗೂ ಪಟ್ಟಣಗಳಲ್ಲಿ ವಾರ್ಡ್ ವಾರು ಬ್ಯಾಂಕ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಅವರು ತಿಳಿಸಿದ್ದಾರೆ.
  ಬ್ಯಾಂಕ್ ಖಾತೆ ತೆರೆಯಲು ಜಿಲ್ಲೆಯ ನಗರ ಮತ್ತು ಪಟ್ಟಣಗಳಲ್ಲಿ ನಿಗದಿಪಡಿಸಿರುವ ಬ್ಯಾಂಕುಗಳ ವಿವರ ಇಂತಿದೆ.
ಕೊಪ್ಪಳ : ನಗರದ ವಾರ್ಡ್ ನಂ.೩ ರ ನಿವಾಸಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹಾಗೂ ಆಂಧ್ರ ಬ್ಯಾಂಕ್. ೧೨, ೨೫- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಆಂಧ್ರ ಬ್ಯಾಂಕ್. ೦೫, ೨೯- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು. ೧೬, ೧೭, ೧೮- ಕೆನರಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ. ೨೦, ೨೧-ಸಿಂಡಿಕೇಟ್ ಬ್ಯಾಂಕ್. ೬, ೭, ೯-ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಡಿಬಿಐ ಬ್ಯಾಂಕ.ಲಿಮಿಟೆಡ್/ ೮, ೧೦, ೧೧-ಎಚ್.ಡಿ.ಎಫ್.ಸಿ. ಬ್ಯಾಂಕ್ ಲಿ. ೧೩, ೧೪- ಎಕ್ಷಿಸ್ ಬ್ಯಾಂಕ್ ಲಿ. ೧೫, ೨೮ – ಐಸಿಐಸಿಐ ಬ್ಯಾಂಕ್. ೧೯, ೨೪, ೨೭-ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್. ೨೨, ೨೩-ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಬ್ಯಾಂಕ್. ೩೦, ೩೧-ವಿಜಯಾ ಬ್ಯಾಂಕ್. ೨೬-ಕಾರ್ಪೋರೇಷನ್ ಬ್ಯಾಂಕ್, ೧, ೨, ೪-ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಹಾಗೂ ಫೆಡರಲ್ ಬ್ಯಾಂಕ್.
ಗಂಗಾವತಿ : ನಗರದ ೬, ೭ ನೇ ವಾರ್ಡ್ ನಿವಾಸಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಮೈನ್), ೯, ೧೧-ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಡಿಬಿ). ೩, ೨೬-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ೮, ೧೭-ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್. ೧೫, ೧೯-ಕೆನರಾ ಬ್ಯಾಂಕ್. ೧, ೨-ಸಿಂಡಿಕೇಟ್ ಬ್ಯಾಂಕ್. ೨೫-ಬ್ಯಾಂಕ್ ಆಫ್ ಬರೋಡಾ. ೨೪, ೨೮-ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ. ೧೬-ಕಾರ್ಪೋರೇಷನ್ ಬ್ಯಾಂಕ್. ೨೭, ೨೯-ಆಂಧ್ರ ಬ್ಯಾಂಕ್. ೨೩-ಎಚ್.ಡಿ.ಎಫ್.ಸಿ. ಬ್ಯಾಂಕ್. ೩೧-ಎಕ್ಷಿಸ್ ಬ್ಯಾಂಕ್. ೨೨-ಫೆಡರಲ್ ಬ್ಯಾಂಕ್. ೧೦, ೧೨-ಕರ್ನಾಟಕ ಬ್ಯಾಂಕ್. ೪, ೧೪-ಐಎನ್‌ಜಿ ವೈಷ್ಯ ಬ್ಯಾಂಕ್. ೧೩, ೩೦-ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ. ೧೮-ಐಸಿಐಸಿಐ ಬ್ಯಾಂಕ್.  ೨೧-ಕರೂರ್ ಬ್ಯಾಂಕ್.  ವಾರ್ಡ್ ಸಂಖ್ಯೆ ೫, ೨೦-ವಿಜಯಾ ಬ್ಯಾಂಕ್.
ಕುಷ್ಟಗಿ : ಪಟ್ಟಣದ ೬, ೭, ೧೫, ೧೬, ೧೭ ವಾರ್ಡ್ ನಿವಾಸಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ೧೨, ೧೩, ೧೪, ೧೮- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು. ೧, ೮, ೯, ೧೦, ೧೧-ಸಿಂಡಿಕೇಟ್ ಬ್ಯಾಂಕ್. ೨, ೩, ೪, ೫, ೨೦-ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಹಾಗೂ ಕಾರ್ಪೋರೇಶನ್ ಬ್ಯಾಂಕ್. ೧೯, ೨೧, ೨೨, ೨೩-ಎಕ್ಷಿಸ್ ಬ್ಯಾಂಕ್.
ಯಲಬುರ್ಗಾ : ಪಟ್ಟಣದ ೩, ೪, ೭, ೮ ನಿವಾಸಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್. ೧, ೨, ೫, ೬-ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ೯, ೧೦, ೧೧- ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್.
  ಇದುವರೆಗೂ ಬ್ಯಾಂಕ್ ಖಾತೆ ಹೊಂದದೇ ಇರುವ ಕುಟುಂಬಗಳು ಕೂಡಲೆ ಆಯಾ ಗ್ರಾಮದ ವ್ಯಾಪ್ತಿ ಅಥವಾ ನಗರ/ಪಟ್ಟಣದ ವಾರ್ಡ್ ವ್ಯಾಪ್ತಿಗೆ ನಿಗದಿಪಡಿಸಿರುವ ಬ್ಯಾಂಕ್‌ಗೆ ತೆರಳಿ ಖಾತೆ ತೆರೆದುಕೊಳ್ಳಬೇಕು.  ಇದಕ್ಕಾಗಿ ಆಯಾ ಬ್ಯಾಂಕುಗಳು ಪ್ರತಿ ಗುರುವಾರ ಮತ್ತು ಶುಕ್ರವಾರ ವಿಶೇಷ ಕೌಂಟರ್ ತೆಗೆದು ಖಾತೆ ತೆರೆಯುವ ಅಭಿಯಾನವನ್ನು ಹಮ್ಮಿಕೊಂಡಿರುತ್ತಾರೆ.  ಈ ಕುರಿತಂತೆ ಯಾವುದೇ ಮಾಹಿತಿ ಪಡೆಯಲು, ಸಮೀಪದ ಬ್ಯಾಂಕ್ ಶಾಖೆ ಅಥವಾ ಜಿಲ್ಲಾ ಲೀಡ್ ಬ್ಯಾಂಕ್- ೦೮೫೩೯-೨೨೦೯೭೬ ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಅವರು ತಿಳಿಸಿದ್ದಾರೆ.

Leave a Reply