ಹಿರಿಯ ಮುಖಂಡರಾದ ಶ್ಯಾಮರಾವ್ ಕುಲಕರ್ಣಿ ಹಾಗೂ ಚಂದಪ್ಪ ತಳವಾರ ಕಾಂಗ್ರೆಸ್ ಸೇರ್ಪಡೆ.

ಕುಷ್ಟಗಿ ೧೦ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರಿಯ ಧುರೀಣರುಗಳಾದ ಸಹಕಾರ ಧುರೀಣ  ಶ್ಯಾಮರಾವ್ ಕುಲಕರ್ಣಿ ಹಿರೇಗೊಣ್ಣಾಗರ ಹಾಗೂ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ  ಚಂದಪ್ಪ ತಳವಾರ ಹನಮಸಾಗರ ಅವರುಗಳು ಮಾನ್ಯ ಅಬಕಾರಿ ಸಚಿವರಾದ   ಸತೀಶ ಜಾರಕಿಹೊಳಿ ಅವರ ಸಮಕ್ಷಮದಲ್ಲಿ  ಸಚಿವರ ಬೆಂಗಳೂರು ನಿವಾಸದಲ್ಲಿ ಮಾಜಿ ಸಚಿವರಾದ   ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಜಾತ್ಯಾತೀತ ತತ್ವದಲ್ಲಿ ಮುನ್ನಡೆದಿರುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ದೀನ ದಲಿತರ, ಹಿಂದುಳಿದ ವರ್ಗದವರ, ಬಡವರ ಏಳ್ಗೆ ಸಾಧ್ಯ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಪಕ್ಷದ ಸೇವೆಗೆ ಸದಾ ಶ್ರಮಿಸುವೆವೆಂದು ಧುರೀಣರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
   ಈ ಸಮಯದಲ್ಲಿ ಹಿರಿಯ ಮುಖಂಡರುಗಳಾದ ಎಲ್.ಜಿ.ಕುಂಟನಗೌಡ್ರು, ಪರಸನಗೌಡ ಪಾಟೀಲ, ಹನಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶಂಕರಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ, ಹನಮಸಾಗರ ಬ್ಲಾಕ್‌ಗಳ ಹಿಂದುಳಿದ ಘಟಕದ ಅಧ್ಯಕ್ಷರಾದ ಯಲ್ಲಪ್ಪ ಬಾಗಲಿ, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾದ ಮರಿಯಪ್ಪ ಗೋತಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ದೊಡ್ಡಯ್ಯ ಗದ್ದಡಕಿ ಮತ್ತು ಮಹಾಂತೇಶ ಶೆಟ್ಟರ ನಿಲೋಗಲ್ ಇನ್ನಿತರ ಮುಖಂಡರು ಉಪಸ್ಥಿತರಿದ್ದು ಈ ಸರಳ ಸಮಾರಂಭವನ್ನು ಸಾಕ್ಷೀಕರಿಸಿದರು.   
Please follow and like us:
error