fbpx

ಸಾಂಸ್ಕೃತಿಕ ಕಲಾವಿದರ ಒಕ್ಕೂಟ ರಚನೆ ಕುರಿತು ಪೂರ್ವಭಾವಿ ಸಭೆ

ಕೊಪ್ಪಳ, ಮಾ. ೧೩ : ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಲಾವಿದರ ಒಕ್ಕೂಟ ರಚಿಸಲು ಉದ್ಧಶಿಸಿಲಾಗಿದ್ದು, ಆ ಕುರಿತು ಮಾ. ೧೫ ರಂದು ರವಿವಾರ ಬೆಳಿಗ್ಗೆ ೧೧.೦೦ ಗಂಟೆಗೆ ನಗರದ ಸಾಹಿತ್ಯಭವನದ ಹತ್ತಿರದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಬಸವರಾಜ ಆಕಳವಾಡಿ ಅವರ ಅಧ್ಯಕ್ಷತೆಯಲ್ಲಿ ಕಲಾವಿದರ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಾಂಸ್ಕೃತಿಕ ಕಲೆಗಳಾದ ಸುಗಮ ಸಂಗೀತ, ಜನಪದ ಸಂಗೀತ ಕಲಾ ಪ್ರಕಾರಗಳಾದ ಸಂಪ್ರದಾಯದ ಹಾಡು, ರಿವಾವಾಯತ್(ಮೋಹರಂ)ಹಾಡು, ಡೊಳ್ಳಿನ ಹಾಡು ಲಾವಣಿ, ಗೀಗೀಪದ, ಹಂತಿಪದ, ಚೌಡ್ಕಿಪದ, ಕುಟ್ಟುವ, ಬೀಸುವ, ಸೋಬಾನೆಪದ, ಪ್ರದರ್ಶನ ಕಲೆಗಳಾದ ಡೊಳ್ಳುಕುಣಿತ, ಕೋಲಾಟ, ಹಲಗಿ ಮಜಲು, ಕಣಿವಾದನ, ದೊಡ್ಡಾಟ, ಸಣ್ಣಾಟ, ಡಪ್ಪಿನಾಟ, ಬಯಲಾಟ, ಯಕ್ಷಗಾನ, ವೀರಗಾಸೆ, ಬೀದಿ ನಾಟಕ, ಕೋಲಾಟ ಮುಂತಾದ ಕಲೆಗಳ ಕಲಾವಿದರನ್ನು ಒಂದೇ ವೇದಿಕೆಗೆ ತರುವುದು ಮತ್ತು ಕಲಾವಿದರಿಗೆ ಸರಕಾರದಿಂದ ಅಗತ್ಯ ನೆರವು ಒದಗಿಸುವುದು, ರಾಜ್ಯಮಟ್ಟದಲ್ಲಿ ಪ್ರಶಸ್ತಿ, ಪುರಸ್ಕಾರ, ಮಾಸಾಶನ ಮುಂತಾದ ಸೌಲಭ್ಯಗಳನ್ನು ಕಲಾವಿದರಿಗೆ ಒದಗಿಸಿಕೊಡುವ ಉದ್ಧೇಶದಿಂದ ಜಿಲ್ಲಾಮಟ್ಟದ ಕಲಾವಿದರ ಒಕ್ಕೂಟ ಸ್ಥಾಪಿಸಲು ಉದ್ಧೇಶಿಸಲಾಗಿದೆ.
ಆಸಕ್ತ ಕಲಾವಿದರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ, ಸೂಚನೆ ನೀಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೪೮೩೩೭೫೫೭೩ ಹಾಗೂ ೯೪೮೨೯೩೮೯೧೭ಗೆ ಸಂಪರ್ಕಿಸಬಹುದಾಗಿದೆ.
Please follow and like us:
error

Leave a Reply

error: Content is protected !!