ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ

ಕೊಪ್ಪಳ ಆ. ೨೦ (ಕ.ವಾ): ಕ್ರೀಡೆಮಾನವನ ಅವಿಭಾಜ್ಯ ಅಂಗ, ಅದನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳ ಬೇಕು, ಮಾನವನು ದೈಹಿಕವಾಗಿ ಸದೃಢರಾಗಿದ್ದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭವೃದ್ದಿ ನಿಗಮದ ಅಧ್ಯಕ್ಷರಾದ ಸಂಗಣ್ಣ ಕರಡಿ ಹೇಳಿದರು.
ಹೊರತಟ್ನಾಳದಲ್ಲಿ ಏರ್ಪಡಿಸಲಾಗಿದ್ದ ಫ್ರೌಢಶಾಲೆಗಳ ವಲಯಮಟ್ಟದ ಕ್ರೀಡಾಕೂಟವನ್ನು ಉದ್ಧಾಟಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಅತ್ಯಂತ ಶ್ರಮಜೀವಿಗಳು ಅವರು ಎರಡು ಕ್ಷೇತ್ರದಲ್ಲಿ ಕಷ್ಟ ಪಡಬೇಕಾಗುತ್ತದೆ. ಕ್ರೀಡೆಯ ಜೊತೆಗೆ ಓದಿನಲ್ಲಿಯೂ ಶ್ರಮ ವಹಿಸಬೇಕಾಗುತ್ತದೆ. ಆರೋಗ್ಯವಿಲ್ಲದಿದ್ದರೆ ಎಷ್ಟೆ ಶ್ರೀಮಂತಿಕೆ ಮತ್ತು
ಅಧಿಕಾರವಿದ್ದರೂ ವ್ಯರ್ಥ, ಆದ್ದರಿಂದಲೇ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂಬ ಗಾದೆಯನ್ನು ಬಳಕೆಗೆ
ತಂದರು ಎಂದರು.
ವಿಧ್ಯಾರ್ಥಿಗಳು ಈಗಿನಿಂದಲೇ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಆಟದಲ್ಲಿ ಸೋಲು ಗೆಲುವು ಅನಿವಾರ್ಯ, ಸೋತಾಗ ನಿರಾಸೆ ಹೊಂದದೆ ಮರಳಿ ಯತ್ನವ ಮಾಡಬೇಕು. ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಸದ್ಯದಲ್ಲಿಯೇ ಜಿಲ್ಲಾ ಕ್ರೀಡಾಂಗಣ ಉನ್ನತಿಕರಿಸಲು ಅಗತ್ಯ ಸೌಲಭ್ಯ ಒದಗಿಸಲು ಶ್ರಮಿಸಲಾಗುವುದು ಎಂದರು.
ನಮ್ಮ ಭಾಗದ ಪ್ರತಿಭೆಗಳು ಕ್ರೀಡಾಕ್ಷೇತ್ರಕ್ಕೆ ತಮ್ಮದೆ ಕೊಡುಗೆ ನೀಡಿ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಮತ್ತು ಶಾಲೆಯ ಕೀರ್ತಿಯನ್ನು ತರಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಭಾಗಿರಥಿ ಬಾಯಿ ಪಾಟೀಲ, ಯಂಕನಗೌಡ
ಹೊರತಟ್ನಾಳ, ಎಸ್‌ಡಿಎಮ್‌ಸಿ ಅಧ್ಯಕ್ಷ ಬಸಪ್ಪ ಅರಕೇರಿ, ರಾಮಣ್ಣ ಅಂಗಡಿ, ಗ್ರಾ.ಪಂ ಸದಸ್ಯರಾದ ಹನುಮಂತಪ್ಪ ಕೆಟಗೇರಿ, ಯಲ್ಲಮ್ಮ ದೇವಪ್ಪ, ತಾ.ಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ, ಗಣ್ಯರಾದ ಕೆ.ಎಂ. ಸಯ್ಯದ್, ಮಂಜು ಹಂದ್ರಾಳ, ಮುಖೋಪಾಧ್ಯಯ ಎಸ್.ಆರ್ ಕಮಾರ, ದೈಹಿಕ ಶಿಕ್ಷಕ ಪ್ರಭು ಹಿರೇಮಠ ಇನ್ನಿತರರು ಉಪಸ್ಥಿತರಿದರು.

Leave a Reply