ಬಿ.ಜೆ.ಪಿಯಿಂದ ವಿಜಯೋತ್ಸವ ಆಚರಣೆ

 ತೀವ್ರ  ಕುತೂಹಲ  ಕೆರಳಿಸಿದ್ದ ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ  ವಿಧಾನಸಭಾ ಚುನಾವಣೆ ಪಲಿತಾಂಶ ಪ್ರಕಟಗೊಂಡು ಜಮ್ಮು ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾದ ಬಿ.ಜೆ.ಪಿ. ಪಕ್ಷ ಮತ್ತು ಜಾರ್ಖಂಡದಲ್ಲಿ ಸಂಪೂರ್ಣ ಬಹುಮತ ಪಡೆದು ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾದ ಬಿ.ಜೆ.ಪಿ. ಗೆಲುವಿನ ಹಿನ್ನೆಲೆಯಲ್ಲಿ ಕೊಪ್ಪಳ ನಗರದಲ್ಲಿ ಇಂದು ಬಿ.ಜೆ.ಪಿ. ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವನ್ನು ಆಚರಿಸಿದರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಯ ಅಧ್ಯಕ್ಷ ಅಮಿತ ಷಾ ಅಭಿಲಾಶೆಯಂತೆ ಜಮ್ಮು ಕಾಶ್ಮೀರ ಮತ್ತು ಜಾರ್ಖಂಡದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತ ಜೊತೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಕಾರ್ಯಕರ್ತರು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನವೋದಯ ವಿರುಪಣ್ಣ, ಅಮರೇಶ ಕರಡಿ, ನವೀನ ಗುಳಗಣ್ಣನವರು, ಎಂ.ಬಿ.ಸಜ್ಜನ್, ಪ್ರಾಣೇಶ ಮಾದಿನೂರ, ಬಸವರಾಜ ನಿರಲಗಿ, ರಾಜು ಭಾಕಳೆ, ಅಪ್ಪಣ್ಣ ದಕಿ, ತೋಟಪ್ಪ ಕಾಮನೂರ, ಸಧಾಶಿವಯ್ಯ ಹಿರೇಮಠ, ಶ್ರವಣಕುಮಾರ,  ಬಸವರಾಜ ಭೋವಿ, ವಿರೇಶ ಎಸ್ ಮಠ, ದೇವರಾಜ ಹಾಲಸಮುದ್ರ, ಡಾ||ಕೊಟ್ರೇಶ ಶೇಡ್ಮಿ, ಪರಮಾನಂದ ಯಾಳಗಿ, ಬಸವರೆಡ್ಡಿ ಬೆಳವಿನಾಳ, ಬಿ.ದಶರಥ, ಮಹೇಶ ಅಂಗಡಿ, ಉಮೇಶ ಕುರಡೆಕರ, ಶ್ರೀಶೈಲ ಮಟ್ಟಿ, ನಾಗರಾಜ ಚಿತ್ರಗಾರ ಮಲ್ಲಪ್ಪ ಬೇಲೇರಿ, ಸೇರಿದಂತೆ ನೂರಾರು ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Reply