ಗ್ರಾಮೀಣ ಜನಪದ ಉಳಿಸಿ- ಬಸವರಾಜ ಅಂಗಡಿ.

ಅಳವಿನ ಹಂಚಿನಲ್ಲ ಇರುವ ಗ್ರಾಮೀಣ ಜಾನಪದ ಉಳಿಯಬೇಕಾದರೆ ಯುವಕರು ಮುಂದಾಗಬೇಕು ರಾಷ್ಟ್ರದ ಸಂಪತ್ತು ಮತ್ತು ನಮ್ಮ ಸಂಸ್ಕೃತಿ ಜಾನಪದದಲ್ಲಿ ಅಡಕವಾಗಿದೆ ಗ್ರಾಮೀಣ ಸೊಗಡಿನ ಕಲೆಗಳಾದ ದೊಡ್ಡಾಟ, ಸಣ್ಣಾಟ, ಹಂತಿ ಪದ ಗಿಗಿ ಪದ, ಲಾವಣಿ ಹಾಡು,  ಬಿಸೋಕಲ್ಲಿನ ಪದ, ಸೋಬಾನಿ ಹಾಡು, ಇನ್ನಿತರ ದೇಶೀಯ ಜಾನಪದ ಕಲೆ ಉಳಿಸುವ ಅಗತ್ಯವಿದೆ ಎಂದು ಗ್ರಾ.ಪಂ ಉಪಾಧ್ಯಕ್ಷ ಬಸವರಾಜ ಅಂಗಡಿ ಹೇಳಿದರು ಅವರು ಕೊಪ್ಪಳ ತಾಲೂಕಿನ ಗುಡ್ಲಾನೂರಿನ ಡಾ. ಅಬ್ದುಲ್ ಕಲಾಂ ಯುವ ಒಕ್ಕೂಟ ಹಾಗೂ ಕ್ರೀಡಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಂಯೋಗದಲ್ಲಿ ಹಮ್ಮಿಕೊಂಡ ಜಾನ ಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Leave a Reply