ಯಲಬುರ್ಗಾ ತಾಲೂಕಿನ ಹಿಂದಿನ ತಹಶಿಲ್ದಾರ ಇ.ಡಿ ಭೃಂಗಿ ಆರೋಪ ಮುಕ್ತ

 ಯಲಬುರ್ಗಾ ತಾಲೂಕಿನ ಹಿಂದಿನ ತಹಶಿಲ್ದಾರರಾದ ಇ.ಡಿ.ಬೃಂಗಿಯವರು ಸದಕ್ಕೆ ನಿವೃತ್ತಿಯಾಗಿರುವ ಇವರು ಅಲ್ಲಿ  ಕೆಲಸ ನಿರ್ವಹಿಸುತ್ತಿದ್ದಾಗ ಕರ್ತವ್ಯ ಲೋಪ ಎಸೆಗಿದ್ದಾರೆಂದು ಕೊಪ್ಪಳ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿsiದ ಪ್ರಕಾರ ಕರ್ನಾಟಕದ ಸರ್ಕಾರದ ಆದೇಶ ಸಂಖ್ಯೆ ಆರ್.ಡಿ.೮೯ ಎ.ಡಿ.ಇ ೨೦೧೨ ದಿನಾಂಕ ೦೭/೧೧/೨೦೧೨ರ ಪ್ರಕಾರ ಅವರನ್ನು ಅಮಾನತ್ತುಗೊಳಿಸಲಾಗಿತ್ತು ಹಾಗೂ ಈ ಬಗ್ಗೆ ಇಲಾಖಾ ವಿಚಾರಣೆಯನ್ನು ನೆಡೆಸಿ ವರದಿಯನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಕೊಪ್ಪಳ ಇವರಿಗೆ ದಿನಾಂಕ ೧೨/೦೬/೨೦೧೩ ರಂದು ಆದೇಶಿಸಿತ್ತು. ಆ ಪ್ರಕಾರ ಅಪರಜಿಲ್ಲಾಧಿಕಾರಿಗಳು ಕೊಪ್ಪಳ ಇವರು ವಿಚಾರಣೆಯನ್ನು ನಡೆಸಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ    ಇ.ಡಿ.ಭೃಂಗಿ ಇವರ ಮೇಲಿನ ಆರೋಪಗಳು ಇಲಾಖಾ ವಿಚಾರಣೆಯಲ್ಲಿ ಸಾಬಿತಾಗಿಲ್ಲವೆಂದು ಸರಕಾರಕ್ಕೆ ದಿನಾಂಕ ೧೪/೦೮/೨೦೧೩ ರಂದು ವರದಿ ಸಲ್ಲಿಸಿರುತ್ತಾರೆ. ಈ ವರದಿಯನ್ನು ಆದರಿಸಿ   ಓ.ಎನ್.ಆರೇರ ಸರಕಾರದ ಅಧಿನ ಕಾರ್ಯದರ್ಶಿ ಕಂದಾಯ ಇಲಾಖೆ ಬೆಂಗಳೂರು ಇವರು ದಿನಾಂಕ ೦೨/೦೧/೨೦೧೪ ರಂದು ಆದೇಶ ಹೋರಡಿಸಿ   ಇ.ಡಿ.ಭೃಂಗಿ ಹಿಂದಿನ ತಹಶಿಲ್ದಾರರು ಯಲಬುರ್ಗಾ ಇವರನ್ನು ದೋಷಾರೋಪಣೆಯಿಂದ ಮುಕ್ತಾರನ್ನಾಗಿಸಿ ಹಾಗೂ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದಾಗಿ ಆದೇಶಿಸಿದ್ದಾರೆ.  

Leave a Reply