ಅ.೨೦ ರಂದು ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ

  ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಪ್ಪಳ, ಗಂಗಾವತಿ ಹಾಗೂ ಮಹಾಲಕ್ಷ್ಮೀ ಕಲಾ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಅ.೨೦ ರಂದು ಗಂಗಾವತಿಯ ಎಮ್.ಎನ್.ಎಮ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.  
  ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ನಾಟಕ (ಹಿಂದಿ ಅಥವಾ ಇಂಗ್ಲೀಷ್), ಭರತನಾಟ್ಯ, ತಬಲ ಸೋಲೋ, ಕೊಳಲು, ಶಾಸ್ತ್ರೀಯ ಸಂಗೀತ, ವೀಣಾ, ಆಶುಭಾಷಣ, ಕುಚುಪುಡಿ ನೃತ್ಯ, ಗಿಟಾರ್ ಸೋಲೋ, ಹಾರ್ಮೋನಿಯಂ ಸೇರಿದಂತೆ ಒಟ್ಟು ಹದಿನಾರು ಸ್ಪರ್ಧೆಗಳನ್ನು ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಸಂಘಟಿಸಲಾಗುವುದು. ಈ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕಿನ ಯುವಕ-ಯುವತಿಯರ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ವಯೋಮಿತಿಯ ಧೃಢೀಕರಣ ಪತ್ರದೊಂದಿಗೆ ನೋಂದಣಿಯಾಗಿರಬೇಕು. ಅ.೨೦ ರೊಳಗಾಗಿ ಗಂಗಾವತಿಯ ಎಮ್.ಎನ್.ಎಮ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯ ಸಂಘಟಕರಲ್ಲಿ ತಮ್ಮ ಹೆಸರು ನೋಂದಾಯಿಸಬಹುದಾಗಿದೆ. 
ಅಭ್ಯರ್ಥಿಗಳು ತಮ್ಮ ಸಂಸ್ಥೆಯ ಕಾಲೇಜು ಅಥವಾ ಇಲಾಖೆಯ ನೋಂದಾಯಿತ ಸಂಸ್ಥೆಗಳಿಂದ ಭಾಗವಹಿಸುವ ಪರವಾನಿಗೆ ಪತ್ರದೊಂದಿಗೆ ನೋಂದಣಿಯಾಗಿರಬೇಕು, ಎಂದಿನಂತೆ ತಮ್ಮ ಸ್ಪರ್ಧೆಯ ಎಲ್ಲಾ ಪರೀಕರಗಳನ್ನು ಮತ್ತು ಸಂಗೀತ ವಾದ್ಯಗಳೊಂದಿಗೆ ಹಾಜರಿರಲು ಸೂಚಿಸಿದೆ.  ಇಲಾಖೆಯಿಂದ ತಾಲೂಕು ಕೇಂದ್ರದಿಂದ ತಾಲೂಕ ಕೇಂದ್ರ ಸ್ಥಾನಕ್ಕೆ ಸಾಮಾನ್ಯ ದರ ಪ್ರಯಾಣ ಭತ್ಯೆ ನೀಡಲಾಗುವುದು, ಇಲಾಖೆಯಲ್ಲಿ ನೋಂದಣಿಯಾದ ಯುವತಿ/ಯುವಕರು ಸಂಘ ಸಂಸ್ಥೆಯವರು ಸ್ಪರ್ಧೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿದ್ದು ಭಾಗವಹಿಸದೇ ಸಂಘ ಸಂಸ್ಥೆಗಳ ಮುಂದಿನ ವರ್ಷದ ನವೀಕರಣವನ್ನು ಮಾಡಲಾಗುವುದಿಲ್ಲ,  ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಾದ ಗಂಗಾವತಿ ತಿಪ್ಪಯ್ಯ ಸ್ವಾಮಿ ಹಿರೇಮಠ-ಮೊ.೯೦೦೮೩೬೩೬೭೦, ಕೊಪ್ಪಳ ಎನ್.ಎಸ್.ಪಾಟೀಲ್-ಮೊ.೯೯೮೦೮೫೨೭೩೫, ಯಲಬುರ್ಗಾ ಹನುಮಂತಪ್ಪ-ಮೊ.೮೯೭೦೨೮೮೮೫೭, ಕುಷ್ಟಗಿ ಮಲ್ಲಿಕಾರ್ಜುನ-ಮೊ.೯೬೬೩೦೫೮೬೬೦ ಅಥವಾ ಇಲಾಖೆಯ ದೂರವಾಣಿ ಸಂಖ್ಯೆ: ೦೮೫೩೯-೨೦೧೪೦೦ ಸಂಪರ್ಕಿಸಬಹುದಾಗಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Please follow and like us:
error