fbpx

ಉಹಾಪೋಹಗಳಿಗೆ ತಲೆಭಾಗುವುದಿಲ್ಲ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ- ಶಾಸಕ ಹಿಟ್ನಾಳ

ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ.
ಕೊಪ್ಪಳ,ಜ:೨೩,  ಕೊಪ್ಪಳ ಕ್ಷೇತ್ರದ ಮುರ್ಲಾಪೂರು, ಗುಡಗೇರಿ, ಕವಲೂರು, ಗಟ್ಟರಡ್ಡಿಹಾಳ, ಹಟ್ಟಿ, ಬೆಳಗಟ್ಟಿ, ಹೈದರನಗರ, ಕೇಸಲಾಪೂರು, ರಘುನಾಥನಹಳ್ಳಿ, ಗ್ರಾಮಗಳಲ್ಲಿ ಅಂದಾಜು ರೂ ಮೊತ್ತ ೧ ಕೋಟಿ ಹೆಚ್.ಕೆ.ಆರ್.ಡಿ.ಬಿ. ಅನುದಾನದಲ್ಲಿ ಸಿ.ಸಿ.ರಸ್ತೆ, ಶಾಲಾಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹಿಸದವರು ಏನೇ ಮಾತನಾಡಿದರು ನಾನು ಕಿವಿಗೊಡುವದಿಲ್ಲ, ಜನರು ನನ್ನನ್ನೂ ಕ್ಷೇತ್ರದ ಅಭಿವೃದ್ಧಿ ಮಾಡಲು ಚುನಾಯಿಸಿ ತಮ್ಮ ಸೇವಕನನ್ನಾಗಿ ಮಾಡಿದ್ದಾರೆ. ಜನರ ಸೇವೆಯೆ ನನ್ನ ರಾಜಕೀಯ ಜೀವನದ ಅದಮ್ಯ ಗುರಿಯಾಗಿದೆ. ದ್ವೇಷದ ರಾಜಕಾರಣ ನನ್ನಿಂದ ಸಲ್ಲದು ಕೇವಲ ಕೊಪ್ಪಳ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲಮಂತ್ರ ಜನಸೇವಕನಾಗಿ ನಾನು ಕಾರ್ಯಮಾಡುತ್ತಿದ್ದೇನೆ. ಜನರ ಆಶೀರ್ವಾದವೆ ನನ್ನ ಅಭಿವೃದ್ಧಿ ಕಾರ್ಯಗಳಿಗೆ ಶ್ರೀರಕ್ಷೆ ರಾಜ್ಯದ   ಸಿದ್ದರಾಮಯ್ಯನವರು ಗ್ರಾಮವಿಕಾಸನದ ಅಡಿಯಲ್ಲಿ ಹೆಚ್ಚಿನ ಅನುದಾನ ನೀಡುತ್ತಿದ್ದು, ಇದರ ಸದುಉಪಯೋಗವನ್ನು ಕ್ಷೇತ್ರಕ್ಕೆ ಮುಟ್ಟಿಸುವ ಸೇವೆಮಾತ್ರ ನನ್ನದು. ಅಭಿವೃದ್ಧಿಯೆ ಕಾರ್ಯಗಳಲ್ಲಿ ರಾಜಕಾರಣ ಸಲ್ಲದು ಬದಲಾಗಿ ಎಲ್ಲರೂ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಮ್.ಸಯ್ಯದ್, ಗಾಳೆಪ್ಪ ಪೂಜಾರ, ಮಾಯಪ್ಪ, ಹೊನ್ನಪ್ಪಗೌಡ, ಕರಡಿ ರಂಗಪ್ಪ, ಹಟ್ಟಿ ಭರಮಪ್ಪ, ದೇವಪ್ಪ ಹಳ್ಳಿ ಕವಲೂರು, ಶಾಹಿದ್ ಕವಲೂರು, ಸುರೇಶ ದಾಸರೆಡ್ಡಿ, ಯಮನೂರಪ್ಪ ನಾಯಕ್, ಸಿದ್ದಪ್ಪ ಕವಲೂರು, ಈರಪ್ಪ ವಾಸ್ತಿ, ಪರಶುರಾಮ ಬೈರಾಪೂರು, ಸಂಗನಗೌಡ ಕವಲೂರು, ಕ್ಷೇತ್ರ ಶಿಕ್ಷಣಧಿಕಾರಿಯಾದ ಉಮೇಶ ಪೂಜಾರ, ತಾಲೂಕು ಪಂಚಾಯತಿ ಈ.ಯೋ. ಕೃಷ್ಣಮೂರ್ತಿ, ವಕ್ತಾರ ಅಕ್ಬರ ಪಾಷಾ ಪಲ್ಟನ ಹಾಗೂ ಇನ್ನೂ ಅನೇಕ ಗ್ರಾಮಪಂಚಾಯತಿ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!