ವಿಠ್ಠಪ್ಪ ಗೋರಂಟ್ಲಿಯವರಿಗೆ ಚಾಲುಕ್ಯ ಪ್ರಶಸ್ತಿ

ಕೊಪ್ಪಳ : ಕೊಪ್ಪಳದ ಹಿರಿಯ ಸಾಹಿತಿ,ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರಿಗೆ ಬೆಂಗಳೂರಿನ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ದಿ ಸಂಘವು ಚಾಲುಕ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಂಕೀರ್ಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಚಾಲುಕ್ಯ ಪ್ರಶಸ್ತಿ ನೀಡಲಾಗುತ್ತಿದ್ದು,ಇದೇ ತಿಂಗಳ ೧೧ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿಯಿರುವ ಉತ್ತರ ಕರ್ನಾಟಕ ಉತ್ಸವ-೨೦೧೩ರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಡಾ.ಚಂದ್ರಶೇಖರ ಸಾಂಬ್ರಾಣಿ ತಿಳಿಸಿದ್ದಾರೆ.
ಚಾಲುಕ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಠ್ಠಪ್ಪ ಗೋರಂಟ್ಲಿಯವರಿಗೆ  ಡಾ.ಮಹಾಂತೇಶ ಮಲ್ಲನಗೌಡರ,ವಿ.ಬಿ.ರಡ್ಡೇರ್, ರಾಜಶೇಖರ ಅಂಗಡಿ, ಜಿ.ಎಸ್.ಗೋನಾಳ, ಹನುಮಂತಪ್ಪ ಅಂಡಗಿ,ಜೆ.ಭಾರದ್ವಾಜ,ಸಿರಾಜ್ ಬಿಸರಳ್ಳಿ ಸೇರಿದಂತೆ  ಕೊಪ್ಪಳದ ಪ್ರಗತಿಪರ ಸಂಘಟನೆಗಳ ಒಕ್ಕೂಟ,ಕವಿಸಮೂಹದವರು ಅಭಿನಂದಿಸಿದ್ದಾರೆ.  

Leave a Reply