ಮಹಾಶಿವರಾತ್ರಿ: ರಾಜ್ಯದ ಜನತೆಗೆ ಮುಖ್ಯಮಂತ್ರಿ ಶುಭಾಶಯ

ಬೆಂಗಳೂರು, ಫೆಬ್ರವರಿ  :  ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.

ಧ್ಯಾನ ಮತ್ತು ಏಕಾಗ್ರತೆಯ ಮಹತ್ವವನ್ನು ಬಿಂಬಿಸುವ ಜಾಗರಣೆಯ ಆಚರಣೆಯು ಆಧ್ಯಾತ್ಮಿಕತೆಯ ಅರಿವಿಲ್ಲದವರಲ್ಲೂ ಭಕ್ತಿಯ ಪರಾಕಾಷ್ಠೆ ಇದ್ದಲ್ಲಿ ಭಗವಂತನು ಒಲಿಯುತ್ತಾನೆ ಎಂಬುದನ್ನು ಪ್ರತಿಪಾದಿಸುತ್ತದೆ.
ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಆಚರಿಸುವ ಉಪವಾಸದಿಂದ ದೇಹವನ್ನು ಶುಚಿಗೊಳಿಸಲು ಹಾಗೂ ಚುರುಕುಗೊಳಿಸಲು ಸಾಧ್ಯ ಎಂಬುದು ಆಸ್ತಿಕರ ನಂಬಿಕೆ.
ಬೇಸಿಗೆಯ ಹೊಸ್ತಿಲಲ್ಲಿರುವ ನಾವೆಲ್ಲರೂ ಆರೋಗ್ಯದ ಬಗ್ಗೆ ಜಾಗೃತರಾಗಿರೋಣ. ಆ ಮಹಾಶಿವನು ಸರ್ವರಿಗೂ ಮಂಗಳವನ್ನು ಉಂಟು ಮಾಡಲಿ ಎಂದು ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Please follow and like us:
error