ಮಾದರಿ ಮತಪೆಟ್ಟಿಗೆಯಿಂದ ಮತದಾನದ ಪ್ರಾತ್ಯಕ್ಷಿಕೆ

ಕೊಪ್ಪಳ, ಏ.೨೮: ತಾಲೂಕಿನ ಓಜನಹಳ್ಳಿ ಗ್ರಾಮ ಸೇರಿದಂತೆ ಕೋಳೂರು, ನೇರೆಗಲ್,ಚಿಲವಾಡಗಿ ಹಟ್ಟಿ, ಮಾದಿನೂರು, ಯತ್ನಟ್ಟಿಯ ಗ್ರಾಮೀಣ ಜನತೆಗೆ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾದರಿ ಮತಪೆಟ್ಟಿಗೆ ಮೂಲಕ ಮತದಾನದ ಪ್ರಾತ್ಯಕ್ಷಿಕೆ ಮೂಲಕ ಜನತೆಗೆ ಮತದಾನ ಕುರಿತು ತಿಳಿಯಪಡಿಸಿದರು.
ಗ್ರಾಮೀಣದ ಜನತೆಗೆ ಹೇಳಿದ್ದಲ್ಲದೇ ಪ್ರಾತ್ಯಕ್ಷಿಕೆಯಿಂದಲೂ ತಿಳಿಯಪಡಿಸಿದಾಗ ಮಾತ್ರ ತಿಳಿಯುತ್ತದೆ ಎಂದರು. ಮೇಲಿನಿಂದ ಕ್ರಮ ಸಂಖ್ಯೆ ೨ ಪ್ರದೀಪ ವಿರುಪಾಕ್ಷಗೌಡ ಪಾಟೀಲ್ ಭತ್ತದ ಹೊರೆ ಹೊತ್ತ ಮಹಿಳೆಯ ಚಿನ್ನೆಗೆ ಗುರುತು ಗುರಿತಿಸಿ ಮತದಾನ ಮಾಡುವಂತೆ ಅವರಿಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್ ಮಾಸ್ಟರ್, ಗಾಳೆಪ್ಪ ಕಡೆಮನಿ, ಹನುಮೇಶ, ರಮೇಶ, ಬಸಪ್ಪ, ವಿರುಪಾಕ್ಷಗೌಡ, ಪ್ರಭು ಬಬ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

Leave a Comment