ಭಜನೆ ಜಾನಪದ ಗೀತೆ – ಜಿಲ್ಲಾ ಮಟ್ಟಕ್ಕೆ ಆಯ್ಕೆ

  ತಾಲೂಕಿನ ಭಾಗ್ಯನಗರದಲ್ಲಿ  ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಕೊಪ್ಪಳ ಗ್ರಾ.ಪಂ ಭಾಗ್ಯನಗರ, ಶ್ರೀ ಗೌರಿ ಶಂಕರ ಶಿಕ್ಷಣ ಹಾಗೂ ಗ್ರಾಮಾಭಿವೃದ್ದಿ ಸೇವಾ ಸಂಘ ಮತ್ತು ಬಾಲ ವಿನಾಯಕ ಗ್ರಾಮೀಣಾಭಿವೃದ್ದಿ ಯುವ ಸಂಘ ಭಾಗ್ಯನಗರ ಇವರ ಸಂಯಕ್ತ  ಆಶ್ರಯದಲ್ಲಿ ನಡೆದ ಕೊಪ್ಪಳ ತಾಲೂಕ ಮಟ್ಟದ ಯುವಜನ ಮೆಳದಲ್ಲಿ  ಕಾತರಕಿಯ ಶ್ರೀ ತಾಯಮ್ಮ ದೇವಿ ಭಜನಾ ಯುವಕ ಮಂಡಳಿ ಭಾಗವಹಿಸಿ ಭಜನೆ ಪ್ರಥಮ ಜಾನಪದ

ಗೀತೆ ಪ್ರಥಮ, ಚರ್ಮವಾಧ್ಯ ಪ್ರಥಮ, ಪ್ರಥಮ ರ್ಸಥಾನವನ್ನು ಪಡೇದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೇಯಾಗಿದ್ದಾರೆ.  ಸ್ಪರ್ಧಾಳುಗಳಾಗಿ ಜಗದಯ್ಯ ಸಾಲಿಮಠ, ಬಸವರಡ್ಡಿ ಬನ್ನಿಗೊಳ, ಬಸಯ್ಯ ಅಬ್ಬಿಗೇರಮಠ, ವೆಂಕಟೇಶ ಕಲ್ಲಿ, ಬಾಳನಗೌಡ ಮೆಟಿ, ರಾಮಣ್ಣ ಕಮ್ಮಾರ, ಮಂಜುನಾಥ ಗುಗ್ರಿ, ಭಾಗವಹಿಸಿದ್ದರು.  ಬಸಯ್ಯ ಅಬ್ಬಿಗೇರಿಮಠ ರಂಗ ಗೀತೆಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಜಗದಯ್ಯ ಸಾಲಿಮಠ ಲಾವಣಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೇದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ವೇದಿಕೆಯ ಮೆಲೆ ರಂಗ ಕಲಾವಿದ ಭಿಮಣ್ಣ, ಅಮರೇಶ ಅಣಗಿ, ಪ್ರಭುರಾಜ ಅಗಳಿ, ತಾಲೂಕ ಕ್ರಿಡಾಧಿಕಾರಿ ಎನ್.ಎಸ್.ಪಾಟೀಲ, ಕ್ರೀಡಾ ಇಲಾಖೆ ಕೃಷ್ಣಯ್ಯ ಪ್ರಶಸ್ತಿಯನ್ನು ವಿತರಿಸಿದರು.

Leave a Reply