ಅಕಾಡೆಮಿಗಳಿಗೆ ಜಿಲ್ಲೆಯವರನ್ನು ಆಯ್ಕೆ ಮಾಡಲು ಒತ್ತಾಯ

ಕೊಪ್ಪಳ, ಅ. ೮. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಎಸ್. ವಿ. ಪಾಟೀಲ್ ಗುಂಡೂರರನ್ನು ನಾಟಕ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡುವಂತೆ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ತೀವ್ರವಾಗಿ ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯದ ಮುಖ್ಯಮಂತ್ರಿಯವರನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರ ಮೂಲಕ ಒತ್ತಾಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರ ಪ್ರಸಕ್ತ ಅವಧಿಗೆ ಕೊಪ್ಪಳ ಜಿಲ್ಲೆಯಿಂದ ಎಸ್. ವಿ. ಪಾಟೀಲ್ ಗುಂಡೂರ ಕಾವ್ಯನಾಮದಿಂದ ಪ್ರಖ್ಯಾತರಾಗಿರುವ ೫೩ ವರ್ಷದ ಗಂಗಾವತಿ ತಾಲೂಕಿನ ಶರಣೇಗೌಡ ಪಾಟೀಲ್‌ರವರು ಕಳೆದ ಮೂರು ದಶಕಗಳಿಂದ ನಾಟಕ ಮತ್ತು ಸಾಹಿತ್ಯದ ಜೊತೆಗೆ ವೃತ್ತಿ ರಂಗಭೂಮಿಗೆ ದುಡಿದಿರುವ ಮತ್ತು ಅದನ್ನು ವ್ಯವಸ್ತಿತವಾಗಿ ಕಟ್ಟುವ ಸಾಮರ್ಥ್ಯವಿರುವದರಿಂದ ಅವರನ್ನು ನಾಟಕ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಮಾಡಬೇಕು. ಪಾಟೀಲರಿಗೆ ಒಂದು ಅವಧಿ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವವಿದೆ, ಸುಮಾರು ೩೧೭ ಕೃತಿಗಳು ಅದರಲ್ಲಿ ೨೧೦ ನಾಟಕಗಳು ಪ್ರಕಟಗೊಂಡಿವೆ, ಅಕಾಡೆಮಿಕ್ಕಾಗಿ ಮತ್ತು ಗ್ರಾಮೀಣ ರಂಗಭೂಮಿಯನ್ನು ಸಮತೋಲನವಾಗಿ ನೋಡುವ ಸಾಮರ್ಥ್ಯವಿರುವದರಿಂದ ಅವರ ಆಯ್ಕೆ ಜಿಲ್ಲೆಯ ಮಟ್ಟಿಗೆ ಹಾಗೂ ಹೈ.ಕ. ವ್ಯಾಪ್ತಿಯಲ್ಲಿ ನೀಡಿದಂತಾಗುತ್ತದೆ.
ಅದೇ ರೀತಿಯಲ್ಲಿ ಕೊಪ್ಪಳ ಜಿಲ್ಲೆಯವರೇ ಆಗಿರುವ ಮತ್ತು ಕಳೆದ ಮೂರು ದಶಕಳಿಂದ ಬೆಂಗಳೂರಿನಲ್ಲಿ ನೆಲೆಸಿ ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅಪಾರವಾದ ಸೇವೆ ಸಲ್ಲಿಸಿ ಲಕ್ಷಾಂತರ ಕಲಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ಬೆಳೆಸಿದ ಅವರನ್ನು ಮಾದ್ಯಮ ಅಥವಾ ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಬೇಕು. ೫೫ ವರ್ಷದ ರಮೇಶ ಸುರ್ವೆಯವರು ಸುರ್ವೆ ಮಾಸಿಕ ಮತ್ತು ಇಂಜಿನಿಯರ್‍ಸ್ ಡೈರಿ ಮಾಸ ಪತ್ರಿಕೆಗಳನ್ನು ೨೭ ವರ್ಷಗಳಿಂದ ನಡೆಸುತ್ತಿದ್ದಾರೆ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ, ಚಲನಚಿತ್ರ ನಿರ್ದೇಶನವನ್ನೂ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ, ಅಪಾರ ಸಂಘಟನಾ ಸಾಮರ್ಥ್ಯ ಹೊಂದಿರುವ ಸುರ್ವೆರವರ ಹಾಡಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ಬಂದಿರುವದೂ ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇವರೀರ್ವರನ್ನು ಅಕಾಡೆಮಿಗಳಿಗೆ ನೇಮಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪತ್ರಬರೆದು ಒತ್ತಾಯಿಸಿದ್ದಾರೆ ಹಾಗೂ ನಿರಂತರವಾಗಿ ಈ ಕುರಿತು ಸಂಪರ್ಕದಲ್ಲಿದ್ದಾರೆ. ಅದೇ ರೀತಿ ವಿವಿಧ ಸಂಘಟನೆಗಳ ಮೂಲಕ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆದು ಇದೂವರೆಗು ಅಂಥಹ ಅವಕಾಶಗಳಿಂದ ಜಿಲ್ಲೆ ವಂಚಿತವಾಗುತ್ತ ಬಂದಿದೆ ಪ್ರಸ್ತುತ ಹೈ.ಕ. ಭಾಗದ ಅಭಿವೃದ್ಧಿಗೆ ಈ ಭಾರಿ ಹೆಚ್ಚು ಹೆಚ್ಚು ಅವಕಾಶಗಳನ್ನು ಜಿಲ್ಲೆಗೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
Please follow and like us:
error

Related posts

Leave a Comment