fbpx

೩೭ನೇ ವರ್ಷದ ಪುರಾಣ ಮಹಾಮಂಗಲ ಕಾರ್ಯಕ್ರಮವ

ಜಿಲ್ಲೆಯ ಯಲಬುರ್ಗಾ ತಾಲೂಕಿನ ನಿಲೋಗಲ್ ಗ್ರಾಮದ ಲಿಂಗೈಕ್ಯ ಮಹಾಶಿವಶರಣೆ ಶಿವಮ್ಮನವರ ಸ್ಮರಣಾರ್ಥವಾಗಿ ಶ್ರೀ ಶರಣಬಸವೇಶ್ವರರ ೩೭ನೇ ವರ್ಷದ ಪುರಾಣ ಮಹಾಮಂಗಲ ಕಾರ್ಯಕ್ರಮವನ್ನು ಇದೇ ದಿನಾಂಕ: ೦೫-೦೩-೨೦೧೩ ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳದ ಶ್ರಿ.ಮ.ನಿ.ಪ್ರ.ಸ್ವ. ಜಗದ್ಗುರು ಅಭಿನವ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಹಿಕೊಳ್ಳುವರು, ಬಾಗಲಕೋಟೆಯ ಶ್ರಿ.ಮ.ನಿ.ಪ್ರ.ಸ್ವ. ಜಗದ್ಗುರು ಪ್ರಭುಸ್ವಾಮಿಗಳು ಚರಂತಿಮಠ, ಮಹಾಸ್ವಾಮಿಗಳು ವಹಿಸಿಕೊಳ್ಳುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರಿ.ಮ.ನಿ.ಪ್ರ.ಸ್ವ ಸದಾಶಿವ ಮಹಾಸ್ವಾಮಿಗಳು ಮಡಿವಾಳೇಶ್ವರಮಠ, ಸೇಡಂ ಅವರು ವಹಿಸಿಕೊಳ್ಳುವರು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾಮದ ವೇ.ಮೂ ಶ್ರೀವಿಶ್ವನಾಥಸ್ವಾಮಿ ಹಿರೇಮಠ ಮತ್ತು ವೇ.ಮೂ ಶ್ರೀ ಶಿವನಾಗಯ್ಯಸ್ವಾಮಿಗಳು ಹಿರೇಮಠ ಅವರು ಆಗಮಿಸುವರು.
ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೫ ರಿಂದ ೬ ಗಂಟೆಯ ವರೆಗೆ ಶರಣಬಸವೇಶ್ವರ ಮೂರ್ತಿಗೆ ಅಭಿಷೇಕ. ೬ ರಿಂದ ೮ ಗಂಟೆಯವರೆಗೆ ಮಹಾಶಿವಶರಣೆ ಶಿವಮ್ಮನವರ ಕರ್ತೃ ಗದ್ದುಗೆಗೆ ಕುಂಭಾಭಿಷೇಕ ೮ ಗಂಟೆಗೆ ಉತ್ಸವ ಆರೋಹಣ ಮತ್ತು ೧೧ ಗಂಟೆಗೆ ಮಹಾಗಣಾರಾಧನೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪ್ರಾಸದ ವಿನಿಯೋಗ ಕಾರ್ಯಕ್ರಮ ಜರುಗುವದು.
ಸಾಯಂಕಾಲ ೫ ಗಂಟೆಗೆ ಶ್ರೀ.ಚನ್ನಪ್ಪ ಶಟ್ಟರ್ ಬಿನ್ನಾಳ ಇವರಿದಂದ ವೀರಗಾಸೆ ನೃತ್ಯ ಹಾಗೂ ಸಕಲ ವಾದ್ಯ ಮತ್ತು ಭಜನೆಯೊಂದಿಗೆ ಉತ್ಸವ ಕಾರ್ಯಕ್ರಮ ಜರುಗುವದು. ನಂತರ ರಾತ್ರಿ ೮ ಗಂಟೆಗೆ ದಯಮಾಡಿಸಿದ ಮಹಾತ್ಮರಿಂದ ಆಶಿರ್ವಚನೆ ಕಾರ್ಯಕ್ರಮ ಜರುಗುವದು ಹಾಗೂ ಜಾತ್ರಾ ನಿಮಿತ್ಯವಾಗಿ ರಾತ್ರಿ ೧೦:೪೫ಕ್ಕೆ ಸೇಡಿಗಾಗಿ ಸಿಡಿದೆದ್ದ ಶಿವನಾಗ ಎಂಬ ಸಾಮಾಜಿಕ ನಾಟಕ ಪ್ರದರ್ಶನವಿದ್ದು ಕಾರಣ ಸಕಲ ಸದ್ಭಕ್ತಾಧಿಗಳು ಆಗಮಿಸಿ ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಸಮಸ್ತ ಸದ್ಭಕ್ತ ಮಂಡಳಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!