You are here
Home > Koppal News > ಅಂಜುಮನ್ ಸಂಸ್ಥೆಯಿಂದ ಬಡ ಮಹಿಳೆಯರಿಗೆ ಸೀರೆ ವಿತರಣೆ

ಅಂಜುಮನ್ ಸಂಸ್ಥೆಯಿಂದ ಬಡ ಮಹಿಳೆಯರಿಗೆ ಸೀರೆ ವಿತರಣೆ

ಕೊಪ್ಪಳ ೦೮: ನಗರದ ಅಂಜುಮನ್ ಖಿದ್ಮತೆ ಮುಸ್ಲಿಂಮೀನ್ ಸಂಸ್ಥೆವತಿಯಿಂದ ಪವಿತ್ರ ರಮಜಾನ್ ಹಬ್ಬದ ನಿಮಿತ್ಯ ಸಂಸ್ಥೆಯ ಅಧ್ಯಕ್ಷರಾದ ಎಂ. ಪಾಷಾ ಕಾಟನ ಇವರ ನೇತೃತ್ವದಲ್ಲಿ ಬಡ ಮಹಿಳೆಯರಿಗೆ ಸೀರೆಗಳನ್ನು ವಿತರಣೆ ಮಾಡಲಾಯಿತು. ನಗರದ ದಿಡ್ಡಿಕೇರಾ, ಮಿಟ್ಟಿಕೇರಾ, ನಿರ್ಮಿತಿ ಕೇಂದ್ರ, ಶಿರಸಪ್ಪಯ್ಯನಮಠ, ಪಲ್ಟನ್ ಓಣಿ, ಹಮಾಲರ ಕಾಲೋನಿ, ಹಾಗೂ ಗೌರಿ ಅಂಗಳ ಓಣಿಯಲ್ಲಿ ಸೀರೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪಾದ್ಯಕ್ಷ ದಿಡ್ಡಿ ಗಫಾರ, ಕಾರ್ಯದರ್ಶಿ ಮಾನ್ವಿ ಪಾಷಾ, ಖಜಾಂಚಿ ಜಾಫರ ಸಂಗಟಿ, ಹುಸೇನ್ ಪೀರಾ ಚಿಕನ್, ಅಕ್ಬರ ಪಲ್ಟನ್, ಜಾವೀದ್ ಖಾದರಿ, ರಫಿ ದಾರವಾಡ , ಅಜೀಮ್, ಸಿ.ಎಂ ಮುಸ್ತಪ್ಪ, ಮೌಬು ಅರಗಂಜಿ, ಪಾಷಾ ತಳಕಲ್, ಮ್ಯಾಕ್ಯಾನಿಕ್ ಪಾಷಾ, ರುಸ್ತುಂ, ಸಂಸ್ಥೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕುವೆಂಪು ನಗರದ ನಿವಾಸಿಗಳಿಂದ ಬಡವರಿಗೆ ಫೀತ್ರಾ ವಿತರಣೆ 
ಕೊಪ್ಪಳ ಅಗಷ್ಟ ೦೮ : ನಗರದ ಹೂವಿನಾಳ ರಸ್ತೆಯಲ್ಲಿರುವ ಆಶ್ರೇಯ ಕಾಲೋನಿಯಲ್ಲಿ ಮಹಮ್ಮದ ಸಾಬದ್ ಮಂಡಲಗೇರಿ ಇವರ ನೇತೃತ್ವದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಜಕಾತ್ ಹಾಗೂ ಫೀತ್ರಾ ವಿತರಣಾ ಮಾಡಲಾಯಿತು. ಈ ಸಂದರ್ಬದಲ್ಲಿ ನಗರದ ಮುಪ್ತಿಯಾದ ಮಹಮ್ಮದ ನಜೀರ ಅಹ್ಮದ ಸಾಬ್, ಮಾನ್ವಿ ಪಾಷಾ, ಹುಸೇನ ಸಾಬ ತಹಶಿಲ್ದಾರ, ನಜೀರಸಾಬ ಇಟಗಿ, ಜಿಲಾನ್ ಸಾಬ್, ರಜಾಕ್ ಸಾಬ, ಮಾಸ್ತರ ಖಯೂಮ್, ಅತೀಶ್ ಅರಗಂಜಿ, ಸಲೀಮ್ ಸಾಬ ಮಂಡಲಗೇರಿ  ಮುಂಥಾದವರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.

Leave a Reply

Top