ಕಪ್ಪು ಹಣ ವಾಪಸ್ ತರಲಿ- ಆನಂದ್ ಸೇಠ್

ನಮ್ಮ ದೇಶದ ಕೋಟ್ಯಾಂತರ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಾ ಬಿದ್ದಿದೆ ಅದನ್ನು ತರುವ ಕೆಲಸ ಕೇಂದ್ರ ಸರಕಾರ ಮಾಡಬೇಕು ಎಂದು ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಆನಂದ್ ಸೇಠ್ ಹೇಳಿದರು. ಅವರು ಭಾಗ್ಯನಗರ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಯುವ ಮೋರ್ಚಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರದ ಭ್ರಷ್ಟಾಚಾರ ವಿರೋಧಿಸಿ ಪಾದಯಾತ್ರೆ ಯ ನಂತರದ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಭೆಗೂ ಮೊದಲು ನಗರದಲ್ಲಿ ಗವಿಮಠದಿಂದ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಲಾಯಿತು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಕಲ್ಯಾಣ ಮಂಟಪದಲ್ಲಿ ಕೊನೆಗೊಂಡಿತು. ಕಾರ್ಯಕ್ರಮದಲ್ಲಿ ಡಾ.ಕೆ.ಜಿ.ಕುಲಕರ್ಣಿ, ಡಾ. ಉಪೇಂದ್ರ,ಅಪ್ಪಣ್ಣ ಪದಕಿ, ನವೀನ ಗುಳಗಣ್ಣ, ನವೋದಯ ವಿರುಪಾಕ್ಷಪ್ಪ, ಎಸ್.ಕೆ.ವಕ್ಕಳದ, ಶರಣಪ್ಪ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error