ಕೊಪ್ಪಳ ಜಿಲ್ಲಾ ಪೋಲಿಸ ತರಬೇತಿ ಪರೇಡ ಮೈದಾನದಲ್ಲಿ ಕರಾಟೆ ತರಬೇತಿ ಮುಕ್ತಾಯ

ಕೊಪ್ಪಳ : ಕೊಪ್ಪಳ ಜಿಲ್ಲಾ ಪೋಲಿಸ ತರಬೇತಿ ಪರೇಡ ಮೈದಾನಲ್ಲಿ ೧೩೩ ಪ್ರಶಿಕ್ಷಣಾರ್ಥಿಗಳಿಗೆ ಮಾನ್ಯ ಕೊಪ್ಪಳ ಜಿಲ್ಲಾ ಪೋಲಿಸ ವರಿಷ್ಟರಾದ ಬಿ.ಎಸ್. ಪ್ರಕಾಶ ರವರ ಆದೇಶದ ಮೇರೆಗೆ ಆರ್.ಪಿ.ಐ ರಾದ ವೈ.ಕೆ ಕಾಶಪ್ಪನವರ ನೇತೃತ್ವದಲ್ಲಿ ಕೊಪ್ಪಳದ ಅಂತರಾಷ್ಟ್ರೀಯ ಕರಾಟೇ ಪಟು ಹಾಗೂ ಮುಖ್ಯ ತರಬೇತುದಾರನಾದ ಮೌನೇಶ ಎಸ್. ವಿ. ಮತ್ತು ತರಬೇತುದಾರ ಕೃಷ್ಣಾ ಜಾಲಿಹಾಳ ಅವರಿಂದ ೧೨ ದಿನಗಳ ಕರಾಟೇ ತರಬೆತಿ ಪಡೆದ ಎಲ್ಲಾ ಪ್ರಶಿಕ್ಷಣಾರ್ಥಿಗಳಿಂದ ಕರಾಟೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರಶಿಕ್ಷಣಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಅದ್ಬುತ ಪ್ರದರ್ಶನವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕರಾಟೆ ಮುಖ್ಯ ತರಭೇತುದಾರ ಮೌನೆಶ ಎಸ್.ವಿ. ಮತ್ತು ತರಬೆತುದಾರ ಕೃಷ್ಣಾ ಜಾಲಿಹಾಳ ಇವರಿಗೆ ಕೊಪ್ಪಳ ಜಿಲ್ಲಾ ಪೋಲಿಸ ಇಲಾಖೆ ವತಿಯಿಂದ ಆರ್.ಪಿ.ಐ ರಾದ ವೈ.ಕೆ ಕಾಶಪ್ಪನವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎ.ಆರ್.ಎಸ್.ಐ ರಾದ ಅರವಿಂದ ಗೌಡ್ರ ಮತ್ತು ವೆಂಕಟೇಶ, ಆನಂದ, ಮಂಜುನಾಥ, ಕೃಷ್ಣಾ, ಪೀರಸಾಬ್, ರಾಜೂ, ಮೂಂತಾದವರು ಪಾಲ್ಗೊಂಡಿದ್ದರು. 
Please follow and like us:
error