ಗವಿಮಠ ಜಾತ್ರೆಗೆ ಹರಿದು ಬರುತ್ತಿರುವ ದವಸ ಧಾನ್ಯ ಹಾಗೂ ತರಕಾರಿಗಳು

  ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜರುಗಲಿರುವ  ಮಹಾದಾಸೋಹಕ್ಕೆ ಕೊಪ್ಪಳ ನಗರ ಹಾಗೂ ಸುತ್ತಲಿನ ಹಳ್ಳಿಗಳ ಭಕ್ತರು ಭಾಜಾ, ಭಜನೆಯೊಂದಿಗೆ ಶ್ರೀಗವಿಮಠಕ್ಕೆ ಮೆರವಣಿಗೆಯೊಂದಿಗೆ  ಬಂದು ತಾವು ಬೆಳೆದ ದವಸ-ಧಾನ್ಯ ಹಾಗೂ ತರಕಾರಿಗಳನ್ನು ಅಲಂಕೃತ ಎತ್ತಿನ ಬಂಡಿಗಳಲ್ಲಿ ಇಲ್ಲವೇ ಲಘುವಾಹನಗಳಲ್ಲಿ ಗವಿಮಠಕ್ಕೆ ಬಂದು  ಭಕ್ತಿಯಿಂದ ಸಮರ್ಪಿಸುತ್ತಿದ್ದಾರೆ. ಇಂದು ಗೊಂಡಬಾಳ  ಗ್ರಾಮದಿಂದ  ೩೦ ಸಾವಿರ ರೊಟ್ಟಿ ಹಾಗೂ ತರಕಾರಿ ಮತ್ತು  ಗಂಗಾವತಿ ತಾಲೂಕಿನ ಜೀರಾಳ ಕಲ್ಗುಡಿ ಮತ್ತು ಕ್ಯಾಂಪ್ ಭಕ್ತಾಧಿಗಳಿಂದ ೬೯ ಚೀಲ ಭತ್ತ  ಶ್ರೀಗವಿಮಠದ ಮಹಾದಾಸೋಹಕ್ಕೆ ಅರ್ಪಿತವಾದವು. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ಧೇಶ್ವರ  ಸ್ವಾಮೀಜಿಗಳು ಆಶಿರ್ವದಿಸಿದ್ದಾರೆ.

Leave a Reply