ವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೦ ನೇ ವರ್ಷ

ಕೊಪ್ಪಳ. ಸೆ. ೨೮. ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಜಚನಿ ಭವನದಲ್ಲಿ ಇಂದು ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್‌ಗಳ ಜಿಲ್ಲಾ ಕಾರ್ಯಕರ್ತರ ಸಭೆ ಜರುಗಿತು.
ಉತ್ತರ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯರವರು ಅಮೇರಿಕಾದ ಚಿಕಾಗೋ ನಗರದಲ್ಲಿ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣಕ್ಕೆ ಇಂದಿಗೆ ೧೨೦ ವರ್ಷವಾಗಿದ್ದು, ಧೀರ ಸಂತನ ಆ ಅಮೋಘ ಭಾಷಣವನ್ನು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಸ್ಮರಿಸಲಾಯಿತು. ಮೂರು ಗಂಟೆಯ ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಶವಾಸನ ಹೇಳಿಕೊಡಲಾಯಿತು. ಮೂರು ತಿಂಗಳ ಕಾಲ ನಡೆಯುವ ನಮ್ಮ ನಡಿಗೆ ಯೋಗದ ಕಡೆಗೆ ಅಭಿಯಾನದ ಕಾರ್ಯಕರ್ತರ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. 
ಈ ಸಂದರ್ಭದಲ್ಲಿ ಪೂರ್ಣಕಾಲಿಕ ಸೇವಾವೃತ್ತಿ ಭಾಯ್ ಗಿರೀಶ್‌ಜಿ ಹರಿಧ್ವಾರ, ಹೊಸಪೇಟೆಯ ಪತಂಜಲಿ ಮಂಡಲ ಪ್ರಭಾರಿ ದಾಕ್ಷಾಯಣಿ ಶಿವಕುಮಾರ, ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೆಇಬಿ, ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾರ್ಯದರ್ಶಿ ರಾಮಗೋಪಾಲ ತಪಾಡಿಯಾ, ಜಿಲ್ಲಾ ಉಪಾಧ್ಯಕ್ಷ ಮಲ್ಲಪ್ಪ ಬೇಲೂರ, ಗಂಗಾವತಿಯ ಮಲ್ಲಿಕಾರ್ಜುನ ನೂಲ್ವಿ, ಡಾ|| ಹಂದ್ರಾಳ, ಸಂತೋಷ ಕೆಲೋಜಿ, ಕುಷ್ಟಗಿ ವಿರೇಶ ಬಂಗಾರಶೆಟ್ಟರ, ತಾವರಗೇರ ಪ್ರಕಾಶ ಶೆಟ್ಟಿ, ಕಾರಟಗಿ ಶರಣಪ್ಪ, ಮೀನಾಕ್ಷಿ ಇತರರು ಇದ್ದರು.

Leave a Reply