ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಉರುಳುಸೇವೆ

ಕೊಪ್ಪಳ :  ದಿನಾಂಕ ೨೬ ರಂದು ನಡೆಯಲಿರುವ ಕೊಪ್ಪಳ ವಿಧಾನ ಸಭೆಯ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಕೆ ಬಸವರಾಜ ಹಿಟ್ನಾಳರವರ ಗೆಲುವಿಗಾಗಿ ಪ್ರಾರ್ಥಿಸಿ ಹಲಗೇರಿ ಕ್ರಾಸ್ ನಿಂದ ಶ್ಯಾಂಭವಿ ದೇವಸ್ಥಾನದ ಸುಮಾರು ೨ ಕಿ.ಮಿ. ವರೆಗೆ ಕಾಂಗ್ರೆಸ್ ಕಾರ್ಯಕರ್ತರಾದ ಗುಡದಪ್ಪ ಹಲಗೇರಿಯವರು ದೀಡನಮಸ್ಕಾರ (ಉರುಳುಸೇವೆ) ಮಾಡಿದರು ನಂತರ ದೇವಿಗೆ ಪೂಜೆಸಲ್ಲಿಸಿ ಮಾತನಾಡಿ ರಾಜ್ಯದಲ್ಲಿ ಬ್ರಷ್ಠ ಬಿಜೆಪಿ ಸರ್ಕಾರ ಸ್ವಜನ ಪಕ್ಷಪಾತ ರೈತರ ವಿರೋಧಿ ಸರಕಾರದ ದೂರಾಡಳಿತವನ್ನು ಖಂಡಿಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಆಪರೇಷನ್ ಕಮಲವನ್ನು ಕೊನೆಗೊಳಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರ ಬಾಂದವರಲ್ಲಿ ಕರೆ ನೀಡಿದರಲ್ಲದೆ ಈ ಬಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ನಂತರ ಶ್ಯಾಂಬವಿದೇವಿಗೆ ಹರಕೆ ಮುಟ್ಟಿಸಿದರು. 
ಈ ಕಾರ್ಯಕ್ರಮಕ್ಕೆ ಕೆ.ಪಿ.ಸಿ.ಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ ಹಾಗೂ ಕಾರ್ಮಿಕ ಮುಖಂಡ ಬಾಬಾಜಾನ್ ಮುಧೋಳ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಸಂಗಮೇಶ ಬಾದವಾಡಗಿ, ಹನುಮೇಶ ಎಂ, ಕಡೆಮನಿ, ಪ್ರಭುಬೇಚನಹಳ್ಳಿ, ಮರಿಯಪ್ಪ ಓಬಳೇಶ, ಗಂಗಾದರ ಸ್ವಾಮಿ, ಹುಲಿಗೆಪ್ಪ ಮತ್ತಿತರರು ಭಾಗವಹಿಸಿದ್ದರು. ನಂತರದಲಿ ಕವಲೂರ ಹಾಗೂ ಗುಡಿಗೇರಿ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು.
Please follow and like us:
error