ಅಗ್ಗದ ದರದಲ್ಲಿ ಕೈಮಗ್ಗದ ಉಡುಪು

ಕೊಪ್ಪಳ  )-ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿ ಒಂದಾದ ದುರ್ಬಲ ವರ್ಗದವರಿಗೆ ಅಗ್ಗದ ದರದ ಸೀರೆ, ಪಂಚೆ ವಿತರಣೆ ಯೋಜನೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿದ್ದು, ೨೦೧೧-೧೨ನೇ ಸಾಲಿನ ದುರ್ಬಲ ವರ್ಗದವರಿಗೆ ಅಗ್ಗದ ದರದ ಸೀರೆ, ಪಂಚೆಯನ್ನು ಪಡಿತರ ಚೀಟಿ ಮೂಲಕ ವಿತರಣೆ ಮಾಡಲಾಗುತ್ತಿದೆ.
  ಈ ಯೋಜನೆಯ ಅನುಷ್ಠಾನಕ್ಕಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕೊಪ್ಪಳ, ಗಂಗಾವತಿ ಮತ್ತು ಯಲಬುರ್ಗಾ ತಾಲೂಕುಗಳ ಸಗಟು ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿದೆ. ಪಡಿತರ ಮೂಲಕ ಸೀರೆ, ಲುಂಗಿ, ಪಂಚೆ ವಿತರಣೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಬಿ.ಪಿ.ಎಲ್. ಫಲಾನುಭವಿಗಳಿಗೆ ಪ್ರತಿ ಕೋರಾ ಪಂಚೆ ವಿತರಣಾ ದರ ೭೦ ರೂ.; ಬಿಳಿ ಪಂಚೆ ದರ ೮೫ ರೂ, ಚೌಕಳಿ ಲುಂಗಿ ದರ ೮೦ ರೂ., ಹತ್ತಿ ಮುದ್ರಿತ ಸೀರೆ ದರ ೯೦ ರೂ. ದರ ನಿಗದಿಪಡಿಸಲಾಗಿದೆ.  ಈಗಾಗಲೆ ಜಿಲ್ಲೆಯ ಎಲ್ಲಾ ತಾಲೂಕು ಸಗಟು ಮಳಿಗೆಯಲ್ಲಿ ತಲಾ ೧೮೦೦ ಲುಂಗಿ, ೬೦೦- ಕೋರಾಪಂಚೆ, ೯೦೦- ಬಿಳಿ ಪಂಚೆ ಹಾಗೂ ೪೦೦- ಹತ್ತಿ ಮುದ್ರಿತ ಸೀರೆ ದಾಸ್ತಾನಿದೆ.  ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹ್ಮದ್ ಮೊಹ್ಸಿನ್ ಅವರು  ಕೋರಿದ್ದಾರೆ.  
Please follow and like us:
error