ಕಿನ್ನಾಳ ಗ್ರಾಮದಲ್ಲಿ ಗ್ರಾಮಸಭೆ

ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಕುರಿತು 
 ದಿನಾಂಕ ೧೨-೦೩-೨೦೧೩ರ ಮಂಗಳವಾರದಂದು ಕೊಪ್ಪಳ ತಾಲೂಕಿನ ಕಲಕೇರಿ ಉಪಜಲಾನಯನ ವ್ಯಾಪ್ತಿಯಲ್ಲಿ ಬರುವ ಕಿನ್ನಾಳ ಗ್ರಾಮದಲ್ಲಿ ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಮಹಿಳೆ ಮತ್ತು  ಪರಿಸರ ಅಭಿವೃದ್ಧಿ ಸಂಸ್ಥೆ ಬಳ್ಳಾರಿ ಇವರ ಸಹಭಾಗಿತ್ವದಲ್ಲಿ ಗ್ರಾಮದ ಜನತೆಗೆ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ಕುರಿತು ಅರಿವು ಮೂಡಿಸುವ  ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು.
 ಈ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ  ಚಕ್ರಪಾಣಿ ನಿರ್ದೇಶಕರು ವೇಡ್ಸ ಸಂಸ್ಥೆ ಸಮಗ್ರ ಜಲಾನಯನ ಕಾರ್ಯಕ್ರಮದ ಕಿರು ಪರಿಚಯ ಮಾಡಿಕೊಟ್ಟರು. ತದನಂತರ ಮುಖ್ಯ ಅತಿಥಿಗಳಾಗಿ ಬಾಗವಹಿಸಿ ಮಾತನಾಡಿದ  ರಾಘವೇಂದ್ರ ಹಿಟ್ನಾಳ ಅಧ್ಯಕ್ಷರು ಜಿಲ್ಲಾ ಪಂಚಾಯತ ಕೊಪ್ಪಳ ಇವರು ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯಲ್ಲಿ ಜನರ ಸಹಭಾಗಿತ್ವದೊಂದಿಗೆ ಭಾಗವಹಿಸಿ ಇಲಾಖೆಯಿಂದ ಸಿಗುವ ತರಭೇತಿಗಳು, ತಂತ್ರಜ್ನಾನವನ್ನು ತಿಳಿದು  ಸದುಪಯೋಗ ಪಡೆದುಕೊಳ್ಳಬೇಕೆಂದು ಗ್ರಾಮ ಸಭೆಯಲ್ಲಿ ಭಾಗವಹಿಸಿದ ರೈತರಿಗೆ ಕರೆ ನೀಡಿದರು. ಅನಂತರ ಮಾತನಾಡಿದ  ಜಂಬಣ್ಣ ಎಸ್.ಐಲಿ ಕೃಷಿ ಅಧಿಕಾರಿಗಳು, ಸಮಗ್ರ ಜಲಾಯನ ನಿರ್ವಹಣೆ ಕಾರ್ಯಕ್ರಮದಲ್ಲಿ ಕೈಗೊಳ್ಳಬಹುದಾದ ವಿವಿಧ ಕಾಮಗಾರಿಗಳ ಜೊತೆಗೆ ರಚಿಸಲಾಗುವ ಗುಂಪು ಸಮಿತಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ  ವೀರಭದ್ರಪ್ಪ ಗಂಜಿ ಗ್ರಾಮ ಪಂಚಾಯತ ಅಧ್ಯಕ್ಷರು ಕಿನ್ನಾಳ ಇವರು ಸಮಗ್ರ ಜಲಾನಯನ ನಿರ್ವಹಣೆ ಯೋಜನೆಗೆ ಬೇಕಾದ ಎಲ್ಲಾ ಸಹಕಾರ ನೀಡಿ ಯೋಜನೆಯ ಸದುಪಯೋಗಪಡಿಸಿಕೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು.
 ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ   ಪ್ರಸನ್ನ ಗಡಾದ, ಹಾಲಿ ತಾಲೂಕ ಪಂಚಾಯತ ಸದಸ್ಯರಾದ ಅಮರೇಶ ಉಪ್ಪಲಾಪೂರ, ಮಾಜಿ ತಾಲೂಕ ಪಂಚಾಯತ ಸದಸ್ಯರಾದ   ಮಹಾಂತೇಶ ಪಾಟೀಲ, ಜಲಾನಯನ ಇಲಾಖೆಯ ಕೃಷಿ ಸಹಾಯಕ ಅಧಿಕಾರಿಗಳಾದ ಬಸವರಾಜ ಗೊಬ್ಬರಗುಂಪಿ,   ಜಿ.ಎಸ್.ಹಿರೇಮಠ, ಎಚ್.ಏ.ಲಮಾಣಿ ವೇಡ್ಸ ಸಂಸ್ಥೆಯ ಅಧಿಕಾರಿಗಳಾದ ಲಾಯಪ್ಪ, ಬಸವರಾಜ, ಮಾರುತಿ ಮತ್ತು ಕುಮಾರಿ ಪ್ರತಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Please follow and like us:
error