ಕ್ರೀಡಾಪಟುಗಳಿಗೆ ಶಿಷ್ಯ ವೇತನ : ಅರ್ಜಿ ಆಹ್ವಾನ

 ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯ ಅನುದಾನದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಸ್ಥಾನಗಳಿಸಿದ ಕ್ರೀಡಾ ಪಟುಗಳಿಗೆ ಶಿಷ್ಯ ವೇತನವನ್ನು ನೀಡಲು ತೀರ್ಮಾನಿಸಿದ್ದು. ಈ ಯೋಜನೆಯಲ್ಲಿ ರಾಷ್ಟ್ರ ಮಟ್ಟದ ಯಾವುದೇ ಕ್ರೀಡೆಯಲ್ಲಿ ಭಾಗವಹಿಸಿ ಸ್ಥಾನ ಗಳಿಸಿದ ಕ್ರೀಡಾ ಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ.
   ೨೦೧೨ ರ ಜನೆವರಿ ೦೧ ರಿಂದ ಡಿಸೆಂಬರ್ ೩೧ ರ ಒಳಗಿನ ಅವಧಿಯಲ್ಲಿ ರಾಷ್ಟ್ರ ಮಟ್ಟದ ಯಾವುದಾದರು ಕ್ರೀಡೆಯಲ್ಲಿ ಭಾಗವಹಿಸಿ ಸ್ಥಾನಗಳಿಸಿದ ಅಂಥಹ ಕ್ರೀಡಾ ಪಟುಗಳಿಗೆ ರೂ.೧೦೦೦=೦೦ ಶಿಷ್ಯ ವೇತನವನ್ನು ನೀಡಲಾಗುವುದು. ಕ್ರೀಡಾ ಪಟುಗಳು ತಮ್ಮ ದಾಖಲಾತಿಗಳು, ಪ್ರಮಾಣ ಪತ್ರ, ಭಾವಚಿತ್ರ ಹಾಗೂ ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ  ಧೃಡಿಕರಿಸಿ ಫೆ.೧೨ ರೊಳಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ  ತಿಳಿಸಿದ್ದಾರೆ.
Please follow and like us:

Leave a Reply