ರಾಜಬಾಗ ಸವಾರ ದರ್ಗಾದ ಆವರಣದಲ್ಲಿಯ ಅಂಗಡಿಗಳ ತೆರವು

ಕೊಪ್ಪಳ :

ನಗರದ ಜವಾಬರ ರಸ್ತೆಯ ವಕ್ಫ್ ಆಸ್ತಿಯಾದ ರಾಜಬಾಗಸವಾರ್ ದರ್ಗಾ ಆವರಣದಲ್ಲಿ ಇರುವ ದರ್ಗಾ ಮಾಲಿಕತ್ವದ  ಎಲ್ಲಾ ಭೂ ಬಾಡಿಗೆದಾರರ ಡಬ್ಬಿ ಮತ್ತು ಅಂಗಡಿಗನ್ನು ರವಿವಾರದಂದು ತೆರವು ಮಾಡಲಾಗುವುದು ಎಂದು ಮ್ಯಾನೇಜ್ ಮೆಂಟ್ ಕಮಿಟಿಯ ಅಧ್ಯಕ್ಷರಾದ ಮಹ್ಮದ್ ಜೀಲಾನ್ ಕಿಲ್ಲೇದಾರ್ ಹೇಳಿದರು. ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ೆಹಲವಾರು ವರ್ಷಗಳಿಂದ ಜಾಗೆಯನ್ನು ಆಕ್ರಮಿಸಿಕೊಂಡು ಕೇವಲ ರೂ. 100, ರೂ. 150 ತಿಂಗಳಿಗೆ ಬಾಡಿಗೆ ಕಟ್ಟುತ್ತಿದ್ದಾರೆ. ಅಲ್ಲದೇ ಕಳೆದ 2 ವರ್ಷಗಳಿಂದ ಬಾಡಿಗೆಯನ್ನೂ ನೀಡಿಲ್ಲ.  ಹೀಗಾಗಿ ಅಲ್ಲಿ ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣ ನಿರ್ಮಿಸುವುದರ ಮುಖಾಂತರ ದರ್ಗಾದ ಅಭಿವೃದ್ದಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈಗ   ಇರುವ  ಬಾಡಿಗೆದಾರರಿಗೆ ಹಲವಾರು ಬಾರಿ ಬಾಡಿಗೆ ಹೆಚ್ಚಳಕ್ಕಾಗಿ ಮನವಿ ಮಾಡಿದರೂ ಅವರು ಒಪ್ಪುತ್ತಿಲ್ಲ.  ಹೀಗಾಗಿ ರವಿವಾರದಂದು ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೆಹಬೂಬಸಾಬ ಅರಗಂಜಿ, ಅಬ್ದುಲ್ ಗಫಾರ್ ಉಪಸ್ಥಿತರಿದ್ದರು 

Leave a Reply