fbpx

ದೇವರಾಜ್ ಅರಸ್ ಮಹಾನ್ ವ್ಯಕ್ತಿ.

ಕಿನ್ನಾಳ- 20- ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದ ದೇವರಾಜ್ ಅರಸ್ ರು ಮಹಾನ್ ವ್ಯಕ್ತಿ ಎಂದು ದೇವರಾಜ ಅರಸು ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಯ ಅಧ್ಯಕ್ಷ ಖಾಜಾವಲಿ ಭಾವಿಕಟ್ಟಿ ಹೇಳಿದರು. ಇಂದು ಕಿನ್ನಾಳ ಗ್ರಾಮದಲ್ಲಿ  ಸಂಸ್ಥೆಯು ಹಮ್ಮಿಕೊಂಡಿದ್ದ ದಿ.ಡಿ.ದೇವರಾಜ್ ಅರಸರ ಜನ್ಮಶತಮಾನೋತ್ಸವ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಅವರು ಬಡವರಿಗೆ, ದೀನದಲಿತರಿಗೆ, ರೈತರ ಏಳಿಗೆಗಾಗಿ ಶ್ರಮಿಸಿದ ಅವರ ಆದರ್ಶವನ್ನು ವಿದ್ಯಾರ್ಥಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು ಕರೆ ನೀಡಿದರು. ಮುಖ್ಯ ಗುರುಗಳಾದ ದಾವಲಸಾಬ ಬೆಟಗೇರಿ ದಿ.ಡಿ.ದೇವರಾಜ್ ಅರಸ್ ರ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕರಾದ ಮಹ್ಮದ್ ರಫಿ ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ  ಶಿಕ್ಷಕರು, ಪಾಲಕರು  ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿರೂಪಣೆಯನ್ನು ಪರಶುರಾಮ  ಇಟಗಿ, ಸ್ವಾಗತವನ್ನು  ಹನುಮಂತ ದಂಡಿನ್ ಮಾಡಿದರೆ  ವಂದನಾರ್ಪಣೆಯನ್ನು ದುರ್ಗಾ ಆರೇರ್ ಮಾಡಿದರು.

Please follow and like us:
error

Leave a Reply

error: Content is protected !!