ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಸಮತೋಲನ ಮತ್ತು ತಾರಸಿ ತೋಟ ತರಬೇತಿ.

ಕೊಪ್ಪಳ
ಸೆ. ೧೬ (ಕ ವಾ) ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಹಾಗೂ ಮಹಿಳಾ ಮತ್ತು ಮಕ್ಕಳ
ಅಭಿವೃಧ್ದಿ ಇಲಾಖೆಯ ಸಂಯೋಗದೊಂದಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಅಂಗನವಾಡಿ
ಕಾರ್ಯಕರ್ತೆಯರಿಗೆ ಸಮತೋಲನ ಆಹಾರ ಮತ್ತು ತಾರಸಿ ತೋಟದ ತರಬೇತಿ ಕಾರ್ಯಕ್ರಮ
ಏರ್ಪಡಿಸಲಾಯಿತು.
       ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕಿ
ವಸಂತ ಪ್ರೇಮ ಮಾತನಾಡಿ, ಸಮತೋಲನ ಆಹಾರದ ಮಹತ್ವವನ್ನು ಅರಿತುಕೊಂಡು ಅಂಗನವಾಡಿ
ಕಾರ್ಯಕರ್ತೆಯರು ಮಕ್ಕಳ ಪೌಷ್ಠಿಕತೆ ಸುಧಾರಣೆಗೆ ಶ್ರಮಿಸಬೇಕು ಮತ್ತು ಇಂತಹ ತರಬೇತಿ
ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕು ಎಂದರು.
     ಕೃಷಿ ವಿಸ್ತರಣಾ ಮುಂದಾಳು ಡಾ.
ಎಂ.ಬಿ ಪಾಟೀಲ ಮಾತನಾಡಿ ಆಹಾರ ಸಮತೋಲನೆಯಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದರು.  
ಪ್ರಗತಿಪರ ರೈತ ವೆಂಕನಗೌಡ ಮೇಟಿಯವರು ಕಾ

ರ್ಯಕ್ರಮ ಉದ್ದೇಶಿಸಿ ಮಾತನಾಡಿದರು.  ಕೃಷಿ
ವಿಸ್ತರಣೆ ವಿಷಯ ತಜ್ಞ ಡಾ. ಜಿ.ಎನ್ ಮರಡ್ಡಿಯವರು ತರಬೇತಿಯಲ್ಲಿ ಆಹಾರ ಉತ್ಪನ್ನಗಳ
ಸದ್ಬಳಕೆ, ಮೌಲ್ಯವರ್ದನೆ ಮತ್ತು ಆಹಾರ ಉತ್ಪನ್ನಗಳ ಆರ್ಥಿಕತೆಯ ಬಗ್ಗೆ ವಿವರಿಸಿದರು.
ನಂತರ ಗೃಹ ವಿಜ್ಞಾನ ತಜ್ಞೆ  ಕವಿತಾ ಉಳ್ಳಿಕಾಶಿ ಅವರು ಅವಶ್ಯಕ ಪೋಷಕಾಂಶಗಳು, ಅವುಗಳ
ಮೂಲ ಪದಾರ್ಥಗಳು, ಆಹಾರ ಸಂಸ್ಕರಣೆ ಮತ್ತು ತಾರಸಿ ತೋಟದ ಬಗ್ಗೆ ತಿಳಿಸಿದರು.
ಕೀಟಶಾಸ್ತ್ರ ತಜ್ಞ ರೋಹಿತ್ ಕೆ.ಎ ಅವರು ಉಗ್ರಾಣ ಕೀಟಗಳ ನಿರ್ವಹಣೆಯ ಬಗ್ಗೆ ತಿಳಿಸಿದರು.

Please follow and like us:
error