ಮಹೇಶ ಬಳ್ಳಾರಿ ಸೂಕ್ಷ್ಮ ಸಂವೇದನೆಯ ಕವಿ- ಯೋಗಿಶ್ ಮಾಸ್ಟರ್.

ಕೊಪ್ಪಳ –  ಭಾವಕಥನಗಳ ಅನುಭವ ನೀಡುವ ಎಡವಿಬಿದ್ದ ದೇವರು ಕವನ ಸಂಕಲನದಲ್ಲಿ ಕವಿ ಇನ್ನೊರ್‍ವ ಕವಿಯೊಂದಿಗೆ ತನಗರಿವಿಲ್ಲದೇ ಸಂವಾದಿಯಾಗುತ್ತಾನೆ. ಕವಿತೆಯ ಮೂಲಕ ಕವಿ ತನ್ನನ್ನು ತಾನು ಅಭಿವ್ಯಕ್ತಿಗೊಳಿಸುತ್ತಾ ಹೋಗುತ್ತಾನೆ ಎಂದು ಖ್ಯಾತ ಲೇಖಕ ಯೋಗಿಶ್ ಮಾಸ್ಟರ್ ಹೇಳಿದರು. ಇತ್ತೀಚಿಗೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕನ್ನಡನೆಟ್ ಡಾಟ್ ಕಾಂ ಕವಿಸಮೂಹದ ೧೮೮ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಕವಿ ಮಹೇಶ ಬಳ್ಳಾರಿಯವರ ಎಡವಿ ಬಿದ್ದ ದೇವರು ಕವನ ಸಂಕಲನ ಕುರಿತು ಮಾತನಾಡುತ್ತಿದ್ದರು.ಪ್ರೇಮವೆಂಬುದು ಯಾರ ಹೃದಯದಲ್ಲಿರುತ್ತದೋ ಅವರು ಕವಿಯಾಗುತ್ತಾರೆ. ಇಲ್ಲಿಯ ಕವಿತೆಗಳಲ್ಲಿ  ಹತಾಶ ಭಾವದ ಗಾಂಭಿರ್‍ಯದ ಜೊತೆಗೆ ಭರವಸೆಯ ಬೆಳಕನ್ನು ವ್ಯಕ್ತಪಡಿಸುತ್ತಾರೆ. ಜೀವಪರ ಸಮಾಜಮುಖಿ ಕವಿ ಮಹೇಶ ಬಳ್ಳಾರಿಗೆ ಕಾವ್ಯ ದಕ್ಕಿದೆ. ಮುಂದಿನ ದಿನಗಳಲ್ಲಿ ಕನ್ನಡ ಕಾವ್ಯ ಲೋಕಕ್ಕೆ ಅವರ ಸೇವೆ ಸಲ್ಲಲಿ ಎಂದು ಹಾರೈಸಿದರು.ಈ ಸಂದರ್ಬದಲ್ಲಿ ಶಿವಾನಂದ ಹೊದ್ಲೂರ, ಹೆಚ್.ಎಸ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರ, ಎ.ಪಿ.ಅಂಗಡಿ, ಆರ್.ಎಚ್.ಅತ್ತನೂರ, ಮಂಜುನಾಥ ಡೊಳ್ಳಿನ, ಈಶ್ವರ ಹತ್ತಿ, ಜಿ.ಎಸ್.ಗೋನಾಳ, ಮಹಾಂತೇಶ ಮಲ್ಲನಗೌಡರ, ಬಸವರಾಜ ಕೊಪ್ಪಳ, ಪ್ರಕಾಶ ಬಳ್ಳಾರಿ, ಹಾಲ್ಕುರಿಕೆ ಶಿವಶಂಕರ, ಸಿದ್ದಲಿಂಗಪ್ಪ ಕೊಟ್ನೆಕಲ್, ಶ್ರೀನಿವಾಸ ಚಿತ್ರಗಾರ, ಶಾಂತಾದೇವಿ ಹಿರೇಮಠ, ಗವಿಸಿದ್ದಪ್ಪ ಬಾರಕೇರ, ವಿಜಯಲಕ್ಷ್ಮೀ ಕೊಟಗಿ, ಅರುಣಾ ನರೇಂದ್ರ, ಶಿ.ಕಾ.ಬಡಿಗೇರ, ವಿಜಯಅಮೃತರಾಜ, ಡಿ.ಎಂ.ಬಡಿಗೇರ  ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಹೇಶ ಬಳ್ಳಾರಿ ವಂದನಾರ್ಪಣೆ ಮಾಡಿದರೆ ಸ್ವಾಗತಕೋರಿದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Related posts

Leave a Comment