ಹೈದರಾಬಾದ ಕರ್ನಾಟಕ ಕಲಾ ಉತ್ಸವ ಹಾಗೂ ಯುವ ಸಾಹಿತ್ಯ ಸಮ್ಮೇಳನದಲ್ಲಿ ಹೈಕ ಕವಿಗೋಷ್ಠಿಗೆ ಆಹ್ವಾನ.

ಕೊಪ್ಪಳ, ಅ.13- ಇದೇ ಅ. ೨೭ ರಂದು ತಾಲೂಕಿನ ಹುಲಿಗಿಯ ಅಮೋಘವರ್ಷ ನೃಪತುಂಗ ವೇದಿಕೆಯಲ್ಲಿ ನಡೆಯಲಿರುವ ಹೈದರಾಬಾದ ಕರ್ನಾಟಕ ಸಾಂಸ್ಕೃತಿಕ ಕಲಾ ಉತ್ಸವ ಹಾಗೂ ಯುವ ಸಾಹಿತ್ಯ ಸಮ್ಮೇಳನದಲ್ಲಿ ಹೈದರಾಬಾದ ಕರ್ನಾಟಕ  ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತ ಕವಿ, ಸಾಹಿತಿ ಮತ್ತು ಲೇಖಕರು ಭಾಗವಹಿಸಲು ಆಹ್ವಾನಿಸಲಾಗಿದೆ.
    ಅಂದು ನಡೆಯಲಿರುವ ಹೈಕ ಕವಿಗೋಷ್ಠಿಯಲ್ಲ್ಲಿ ಭಾಗವಹಿಸುವ ಕವಿಗಳು ತಮ್ಮ ಸ್ವರಚಿತ ಕವನ, ಚುಟುಕು, ಕಾವ್ಯವಾಚನ ಮಾಡಬುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಾನಪದ ಕಲಾವಿದ ವೈ. ಬಿ. ಜೂಡಿ ಮೊ. ೯೪೮೩೩೭೫೫೭೩, ಶ್ರೀನಿವಾಸ ಚಿತ್ರಗಾರ, ೯೯೧೬೭೨೩೫೮೩, ಗವಿಸಿದ್ದಪ್ಪ ಬಾರಕೇರ ೯೯೮೦೭೦೮೩೮೪, ಮಂಜುನಾಥ ಚಿತ್ರಗಾರ ೯೪೮೦೧೫೦೭೫೭, ಗೆ ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಲಾಗಿದೆ ಎಂದು ಹೈದರಾಬಾದ ಕರ್ನಾಟಕ ನಾಗರಿಕರ ವೇದಿಕೆಯ ಜಿಲ್ಲಾಧ್ಯಕ್ಷ ಮಹ್ಮದ್ ಜೀಲಾನ ತಿಳಿಸಿದ್ದಾರೆ.

Leave a Reply